ಯುವತಿ-ಆಂಟಿಯರೇ ಇವರ ಟಾರ್ಗೆಟ್ | ನಂಬರ್ ಪಡೆದ ಬಳಿಕ ಇವರು ಆಡಿದ್ದೇ ಆಟ!
ಮಂಗಳೂರು: 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾರ್ಚ್ 27ರಂದು ಪೊಲೀಸರು ಬಂಧಿಸಿದ್ದು, ಇವರ ಬಂಧನದೊಂದಿಗೆ ಮಹಿಳೆಯ ಮೇಲಿನ ದೌರ್ಜನ್ಯ ನಡೆಸುವ ದೊಡ್ಡ ತಂಡವೊಂದರ ಸುಳಿವು ಲಭ್ಯವಾಗಿದೆ.
ಈ ಘಟನೆಯ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಬೆಚ್ಚಿಬೀಳಿಸುವ ಮಾಹಿತಿ ನೀಡಿದ್ದು, ಮೊಹಮ್ಮದ್ ಮುನೀರ್, ಪೊಳಲಿ ನಿವಾಸಿ ತಸ್ವಿನ್ ಹಾಗೂ ಕೈಕಂಬ ನಿವಾಸಿ ಸಾದಿಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಮೊಹಮ್ಮದ್ ಮುನೀರ್ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ ಅವರು ಎಂದು ತಿಳಿಸಿದ್ದಾರೆ.
ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ನಂಬರ್ ಪಡೆದು, ಅವರನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಒಂದು ತಂಡವೇ ಗುರುಪುರ-ಕೈಕಂಬ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಲೈಂಗಿಕವಾಗಿ ಬಳಸಿಕೊಂಡ ಬಳಿಕ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಶಶಿಕುಮಾರ್ ತಿಳಿಸಿದರು.
ಮೊದಲು ಮಹಿಳೆಯರು-ಯುವತಿಯರ ನಂಬರ್ ಸಂಗ್ರಹಿಸುತ್ತಾರೆ. ಆ ಬಳಿಕ ತಮ್ಮದಲ್ಲದ ಕಾರುಗಳಲ್ಲಿ ಬಂದು ಶ್ರೀಮಂತರಂತೆ ಪೋಸು ನೀಡುತ್ತಾರೆ. ಹೆಣ್ಣುಮಕ್ಕಳನ್ನು ಕಾರಿನಲ್ಲಿ ಕರೆದೊಯ್ಯಲು ಆರಂಭಿಸುತ್ತಾರೆ. ಬಳಿಕ ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ ಎಂದು ಅವರು ತಿಳಿಸಿದರು.
ಈಗ ಬಂಧನಕ್ಕೊಳಗಾಗಿರುವ ಮುನೀರ್ ಎಂಬಾತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಅಪರಾಧಿ ಹಿನ್ನೆಲೆಯನ್ನು ಹೊಂದಿದವನಾಗಿದ್ದಾನೆ. ಉತ್ತಮ ಉಡುಪು ಧರಿಸಿ, ಕಾರುಗಳಲ್ಲಿ ಸುತ್ತಾಡಿ ಹೆಣ್ಣುಮಕ್ಕಳನ್ನು ಆರಂಭದಲ್ಲಿ ಸೆಳೆಯುತ್ತಾರೆ. ಈ ಯುವಕರ ಗ್ಯಾಂಗ್ ನಿಂದಾಗಿ ಹೆಣ್ಣು ಮಕ್ಕಳು ಮೋಸಹೋಗುತ್ತಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ ಈ ತಂಡಕ್ಕೆ ಉನ್ನತ ವ್ಯಕ್ತಿಗಳ ಸಂಪರ್ಕವಿದೆ. ಹೀಗಾಗಿ ಯಾವುದೇ ಭಯವಿಲ್ಲದೇ ಇವರು ತಮ್ಮ ಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ. ಮಹಿಳೆಯರನ್ನು ಲೈಂಗಿಕವಾಗಿ ಬಳಸಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇದಕ್ಕೆ ಬೆದರಿ ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಚಿನ್ನಾಭರಣಗಳನ್ನು ನೀಡಿ ಬಲಿಪಶುಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂತಹ ತಂಡಗಳು ಎಲ್ಲಿಯೇ ಆದರೂ ಕಾರ್ಯಾಚರಿಸುತ್ತಿದ್ದರೆ, ಸ್ಥಳೀಯರು ನೇರವಾಗಿ ಪೊಲೀಸರಿಗೆ ದೂರು ನೀಡಿ. ಇನ್ನಷ್ಟು ಯುವತಿಯರು ಮಹಿಳೆಯರು ಈ ದುಷ್ಕೃತ್ಯಗಳಿಗೆ ಬಲಿಯಾಗುವುದನ್ನು ತಡೆಯಬೇಕಿದೆ ಎನ್ನುವಅಭಿಪ್ರಾಯಗಳು ಕೇಳಿ ಬಂದಿವೆ.
ಬಯಲು ಶೌಚಕ್ಕೆ ಬಂದಿದ್ದ ಬಾಲಕಿಯನ್ನು ಅಪಹರಿಸಿ ಕಾರಿನಲ್ಲಿ ಅತ್ಯಾಚಾರ ನಡೆಸಿದ ದುಷ್ಕರ್ಮಿ!