ನಂಬರ್ ಪ್ಲೇಟ್ ನಲ್ಲಿ SEX ಪದ ಬಳಕೆ: ಸಾರಿಗೆ ಇಲಾಖೆಗೆ ಮಹಿಳಾ ಆಯೋಗ ನೋಟಿಸ್
ನವದೆಹಲಿ: ಸ್ಕೂಟಿಯ ನಂಬರ್ ಪ್ಲೇಟ್ ನಲ್ಲಿ SEX ಎಂದು ಬರೆದಿರುವುದು ಯುವತಿಗೆ ಮುಜುಗರ ಉಂಟು ಮಾಡಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇದೀಗ ದೆಹಲಿ ಮಹಿಳಾ ಆಯೋಗವು ಸಾರಿಗೆ ಇಲಾಖೆಗೆ ನೋಟಿಸ್ ಕಳುಹಿಸಿದೆ.
SEX ಎಂಬ ನೋಂದಣಿ ಸಂಖ್ಯೆಯನ್ನು ಬದಲಿಸುವಂತೆ ಕೋರಿರುವ ದೆಹಲಿ ಮಹಿಳಾ ಆಯೋಗ ಈ ಸರಣಿಯಲ್ಲಿ ನೋಂದಣಿಯಾಗಿರುವ ಒಟ್ಟು ವಾಹನ ಸಂಖ್ಯೆಯನ್ನು ಸಲ್ಲಿಸುವಂತೆ ತಿಳಿಸಿದೆ. ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ಇಲಾಖೆಯಿಂದ ಬಂದಿರುವ ದೂರುಗಳ ವಿವರವನ್ನು ಕೇಳಿದ್ದು, ಈ ಬಗ್ಗೆ 4 ದಿನಗಳೊಳಗೆ ವಿವರವಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದೆ.
ಯುವತಿಯೋರ್ವಳಿಗೆ ಸ್ಕೂಟಿಯ SEX ನಂಬರ್ ಪ್ಲೇಟ್ ನಿಂದಾಗಿ ಜನರು ಪದೇಪದೇ ಗೇಲಿ ಮಾಡುತ್ತಿದ್ದು, ಇದರಿಂದಾಗಿ ಮುಜುಗರಕ್ಕೀಡಾದ ಆಕೆ ಸ್ಕೂಟಿ ಬಳಸುವುದನ್ನೇ ಬಿಟ್ಟಿದ್ದಳು. ಇದಲ್ಲದೇ ತಾನು ಇದರಿಂದ ಅನುಭವಿಸುತ್ತಿರುವ ಮುಜುಗರವನ್ನು ಹೇಳಿಕೊಂಡಿದ್ದಳು.
ದೆಹಲಿಯಲ್ಲಿ ದ್ವಿಚಕ್ರ ವಾಹನಗಳೀಗೆ ಎಸ್ ಇಂಗ್ಲಿಷ್ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ರಾಜ್ಯದ ಸೂಚಕವಾಗಿ ಡಿಎಲ್ ಅಕ್ಷರದ ಜೊತೆಗೆ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ನೀಡಲಾಗುತ್ತದೆ. ಕಾರಿಗೆ ‘ಸಿ’ ಹಾಗೂ ಬೈಕ್ ಗೆ ‘ಎಸ್’ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ದೆಹಲಿಯಲ್ಲಿ ಈಗ ಇಎಕ್ಸ್ ಸೀರಿಸ್ ನಡೆಯುತ್ತಿದೆ. ಹೀಗಾಗಿ ಕೆಲವು ದ್ವಿಚಕ್ರ ವಾಹನಗಳಿಗೆ ಎಸ್ ಇ ಎಕ್ಸ್(SEX) ಎಂಬ ನಂಬರ್ ನೀಡಲಾಗುತ್ತಿದೆ. ಇದರಿಂದಾಗಿ ಸೀಮಿತ ಮನಸ್ಥಿತಿಯ ಜನರ ನಡುವೆ ಈ ನಂಬರ್ ಪಡೆದ ಮಹಿಳೆಯರು ಮುಜುಗರಕ್ಕೀಡಾಗುವ ಸನ್ನಿವೇಶಗಳು ಸೃಷ್ಟಿಯಾಗಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
“ನಿನ್ನನ್ನು ನೋಡೋಕೆ ಬಂದಿದ್ದೀನಿ…” | ಪುಟಾಣಿ ಅಭಿಮಾನಿ ಜೊತೆಗೆ ಸಿದ್ದರಾಮಯ್ಯ ಮಾತು
ಭೀಕರ ಜ್ವಾಲಾಮುಖಿ ಸ್ಫೋಟ: 13 ಮಂದಿ ಸಾವು, ಗ್ರಾಮ ಬಿಟ್ಟು ಓಡಿದ ಜನ
ಇಂದು ಅಗಲಿದ ಹಿರಿಯ ನಟ ಶಿವರಾಮ್ ಅವರ ಅಂತ್ಯಕ್ರಿಯೆ
ತಂದೆಯ ಕಣ್ಣ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಯುವಕ!
ಭೀಕರ ಕೊಲೆ: ಒಮಿಕ್ರಾನ್ ಗೆ ಹೆದರಿ ಪತ್ನಿ, ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಬರ್ಬರ ಹತ್ಯೆ