ನರ್ಸ್ ನ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು!: ತಾಯಿಯ ಕಣ್ಣಮುಂದೆಯೇ ಘಟನೆ
ಉತ್ತರಪ್ರದೇಶ: ನವಜಾತ ಶಿಶು ನರ್ಸ್ ಕೈಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಹೆರಿಗೆಯ ನಂತರ ನರ್ಸ್ ಮಗುವನ್ನು ಅಜಾಗರೋಕತೆಯಿಂದ ಬಟ್ಟೆಯಿಂದ ಸುತ್ತಿ ಕೊಂಡೊಯ್ಯುತ್ತಿದ್ದ ವೇಳೆ ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ ಎನ್ನಲಾಗಿದೆ.
ಲಕ್ನೋದ ಚಿನ್ಹಾಟ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಹೆರಿಗೆ ಕೊಠಡಿಯಲ್ಲಿದ್ದ ತಾಯಿ ಈ ದೃಶ್ಯವನ್ನು ನೋಡಿದ್ದು, ತಾಯಿಯ ಚೀರಾಟ ಕೇಳಿ ಸಂಬಂಧಿಕರು ಬಳಿ ಹೋಗಲು ಯತ್ನಿಸಿದ್ದಾರೆ. ಆದರೆ ಸಿಬ್ಬಂದಿ ಅವರನ್ನು ತಡೆದಿದ್ದಾರೆ ಎನ್ನಲಾಗಿದೆ.
ಮಗು ಜನಿಸಿದಾಗ ಆರೋಗ್ಯವಾಗಿತ್ತು ಮತ್ತು ಇಲ್ಲಿದ್ದ ನರ್ಸ್ ಮಗುವನ್ನು ಒಂದು ಕೈಯಿಂದ ಎತ್ತಿದಾಗ ಕೆಳಗೆ ಬಿದ್ದಿದ್ದು, ಇದರಿಂದಾಗಿ ಮಗು ಸತ್ತು ಹೋಗಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ. ಆದರೆ, ಮಗು ಹುಟ್ಟಿದಾಗಲೇ ಸಾವನ್ನಪ್ಪಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಮನೆಯವರು ಪೊಲೀಸರಿಗೆ ದೂರು ನೀಡಿದ್ದು ತನಿಖೆಗಾಗಿ ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಗುವಿನ ತಲೆಗೆ ಗಾಯವಾಗಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಇಫ್ತಾರ್ ಕೂಟದಲ್ಲಿ ಟೋಪಿ ಧರಿಸಲು ಹಿಂದೇಟು ಹಾಕಿದ ಪ್ರಜ್ವಲ್ ರೇವಣ್ಣ!
ತಕರಾರು ಯಾಕೆ ನೀವೇ ಸಿಎಂ ಆಗಿ ಬಿಡಿ ಎಂದ ಯತ್ನಾಳ್: ನಕ್ಕ ಬಸವರಾಜ್ ಬೊಮ್ಮಾಯಿ
ಮೂರನೇ ವಿಶ್ವ ಯುದ್ದದ ಎಚ್ಚರಿಕೆ ನೀಡಿದ ರಷ್ಯಾ
ಸ್ವಲ್ಪದರಲ್ಲೇ ಬಚಾವ್ ಆದ ಸಿಎಂ ಬೊಮ್ಮಾಯಿ: ಗೋಪೂಜೆ ವೇಳೆ ಮುನ್ನುಗ್ಗಿದ ಎತ್ತು!