ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು - Mahanayaka
1:28 PM Wednesday 10 - September 2025

ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು

shwethanjali
07/10/2021

ಬೆಂಗಳೂರು: ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆ ರಹಸ್ಯ ಇದೀಗ ಒಂದೂವರೆ ತಿಂಗಳ ಬಳಿಕ ಬಯಲಿಗೆ ಬಂದಿದ್ದು, ಯುವತಿಯ ಮೊಬೈಲ್ ನಲ್ಲಿ ದೊರಕಿದ ಫೋಟೋಗಳಿಂದ ಪಾಲಕರು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.


Provided by

ಆಗಸ್ಟ್ 17ರಂದು  23 ವರ್ಷ ವಯಸ್ಸಿನ ಶ್ವೇತಾಂಜಲಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಅವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ಮೃತದೇಹ ನೀಡಿದ್ದರು.

ಇದೀಗ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬಾತನ ಜೊತೆಗೆ ಯುವತಿ ಇದ್ದ ಹಲವು ರೀತಿಯ ಫೋಟೋಗಳು ಯುವತಿಯ ಮೊಬೈಲ್ ನಲ್ಲಿ ಪತ್ತೆಯಾಗಿವೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಗಿರೀಶ್ ಹತ್ಯೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

ಆಂಧ್ರ ಮೂಲದ ಶ್ವೇತಾಂಜಲಿ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದರ ನಡುವೆ ಸಂಬಂಧಿಯೋರ್ವನ ಜತೆ ಆಕೆಗೆ ಮದುವೆ ಕೂಡ ನಿಗದಿಯಾಗಿತ್ತು.  ಆದರೆ ಗಿರೀಶ್ ವಿವಾಹಿತನಾಗಿದ್ದರೂ,  ಶ್ವೇತಾಂಜಲಿಯನ್ನು ತನ್ನ ಬಲೆಗೆ ಬೀಳಿಸಿಕೊಂಡು ಆಕೆಯ ಜತೆ ಲೈಂಗಿಕ ಸಂಪರ್ಕ ಬೆಳೆಸಿ ಕೊಲೆ ಮಾಡಿದ್ದಾನೆಂದು ಶ್ವೇತಾಳ ಪೋಷಕರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಅರ್ಜಿ ನೀಡಲು ಬಂದ ಮಹಿಳೆಗೆ ಕಿರುಕುಳ: ಗ್ರಾ.ಪಂ. ಸದಸ್ಯನ ವಿರುದ್ಧ ದೂರು

2,700 ವರ್ಷದ ಹಳೆಯ ಪುರಾತನ ಐಶಾರಾಮಿ ಶೌಚಾಲಯ ಪತ್ತೆ!

ಮನೆ ಕುಸಿದು 7 ಮಂದಿ ಸಾವು ಪ್ರಕರಣ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಅಣಬೆ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ | ಮಹಿಳೆಯ ಸ್ಥಿತಿ ಗಂಭೀರ

ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ!

ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯವೂ ಇಲ್ಲ | ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

ಮನೆಗೆ 1 ಕಿ.ಮೀ. ದೂರವಿರುವಾಗಲೇ ನಡೆಯಿತು ಅಪಘಾತ | ತಾಯಿ, ಮಗ ಇಬ್ಬರೂ ಸಾವು

ಇತ್ತೀಚಿನ ಸುದ್ದಿ