ಕೋಲ್ಕತ್ತಾಕ್ಕಿಂತ ಮುಂಚೆ ಜಾರ್ಖಂಡ್ ನಲ್ಲಿ ನಡೆದಿತ್ತು ನರ್ಸ್ ಮೇಲೆ ಅತ್ಯಾಚಾರ: ಭಯಾನಕ ಮಾಹಿತಿ ಬಹಿರಂಗ - Mahanayaka
3:37 PM Thursday 12 - September 2024

ಕೋಲ್ಕತ್ತಾಕ್ಕಿಂತ ಮುಂಚೆ ಜಾರ್ಖಂಡ್ ನಲ್ಲಿ ನಡೆದಿತ್ತು ನರ್ಸ್ ಮೇಲೆ ಅತ್ಯಾಚಾರ: ಭಯಾನಕ ಮಾಹಿತಿ ಬಹಿರಂಗ

24/08/2024

ಆಗಸ್ಟ್ ಒಂಬತ್ತರಂದು ಕೋಲ್ಕತ್ತಾ ವೈದ್ಯೆಯ ಹತ್ಯೆ ನಡೆಯುವುದಕ್ಕಿಂತ ಒಂದು ವಾರ ಮೊದಲೇ ಜಾರ್ಖಂಡ್ ನಲ್ಲಿ ತಸ್ಲೀಮ್ ಜಹಾನ್ ಎಂಬ ನರ್ಸ್ ನ ಅತ್ಯಾಚಾರ ಮತ್ತು ಹತ್ಯೆ ನಡೆದಿದೆ. ಆದರೆ ಕೊಲ್ಕತ್ತಾ ವೈದ್ಯೆಯ ಹತ್ಯೆಗೆ ವ್ಯಕ್ತವಾದ ದೇಶಾದ್ಯಂತದ ಪ್ರತಿಭಟನೆಯ ಒಂದಂಶವೂ ತಸ್ಲೀಮ್ ಜಹಾನ್ ಹತ್ಯೆಗೆ ವ್ಯಕ್ತವಾಗದೆ ಇರುವುದಕ್ಕೆ ಕಾರಣ ಏನು ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಕನಿಷ್ಠ ಈ ಪ್ರಕರಣವನ್ನು ಸರ್ಕಾರ ಸಿಬಿಐಗೂ ವಹಿಸಿಕೊಡದೆ ಇರುವುದರ ಹಿಂದೆ ದೊಡ್ಡ ಸಂಚಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜುಲೈ 30 ರಂದು ನಾಪತ್ತೆಯಾದ ತಸ್ಲೀಮ್ ಜಹಾನ್ ಅವರ ಮೃತಶರೀರವು ಎಂಟು ದಿನಗಳ ಬಳಿಕ ಪತ್ತೆಯಾಗಿತ್ತು.

ಪೊಲೀಸರ ಪ್ರಕಾರ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ದುಡಿಯುತ್ತಿರುವ ತಸ್ಲಿಮ್ ಜಹಾನ್ ಅವರು ಜುಲೈ 30ರಂದು ಕೆಲಸ ನಿಮಿತ್ತ ಹೋಗಿದ್ದಾರೆ. ಆದರೆ ಮರಳಿ ಬಂದಿಲ್ಲ. ಮರುದಿನ ಆಕೆಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಂಟು ದಿನಗಳ ಬಳಿಕ ಆಕೆಯ ಶವ ಪತ್ತೆಯಾಗಿದೆ. ಆಕೆಯ ಮನೆಯಿಂದ ಒಂದುವರೆ ಕಿಲೋಮೀಟರ್ ದೂರದ ಉತ್ತರಪ್ರದೇಶದ ಗಡಿಯಲ್ಲಿ ಶವ ಪತ್ತೆಯಾಗಿದೆ. ಆಕೆಯ ಫೇಸ್ ಅನ್ನು ಗುರುತುಹಿಡಿಯಲಾಗದಷ್ಟು ಜಜ್ಜಲಾಗಿತ್ತು ಮತ್ತು ಆಕೆಯ ಪರ್ಸ್ ಮತ್ತು ಮೊಬೈಲ್ ನಾಪತ್ತೆಯಾಗಿತ್ತು.

ಪೊಲೀಸ್ ತನಿಖೆಯ ಬಳಿಕ 28 ವರ್ಷದ ಕಟ್ಟಡ ಕಾರ್ಮಿಕ ಉತ್ತರ ಪ್ರದೇಶದ ಧರ್ಮೇಂದ್ರ ಕುಮಾರ್ ಎಂಬವ ಈ ಕ್ರೌರ್ಯಸಾಗಿದ್ದಾನೆ ಅನ್ನೋದು ಗೊತ್ತಾಗಿದೆ. ಆತನನ್ನು ಬಂಧಿಸಲಾಗಿದೆ. ಆಕೆ ತನ್ನ ಮರಳಿ ಮನೆಗೆ ಪ್ರವೇಶಿಸುವ ಹೊತ್ತಲ್ಲಿ ಆತ ಆಕೆಯ ಮೇಲೆ ದಾಳಿ ನಡೆಸಿದ್ದಾನೆ ಮತ್ತು ಹತ್ತಿರದ ಪೊದೆಗೆ ಎತ್ತಿಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸ ಮುಖ್ಯಸ್ಥರಾದ ಮಂಜುನಾಥ ಹೇಳಿದ್ದಾರೆ
ಈ ಹತ್ಯೆಯ ಬಗ್ಗೆ ತನಿಖೆ ನಡೆಸುವುದಕ್ಕೆ ಉತ್ತರಖಂಡ ಸರಕಾರ ಸಿಟ್ ಅನ್ನು ನೇಮಿಸಿತ್ತು.


Provided by

ಆದರೆ ಕುಟುಂಬಸ್ಥರು ಪೊಲೀಸ್ ಮಾಹಿತಿಯನ್ನು ತಿರಸ್ಕರಿಸಿದ್ದಾರೆ. ಈ ಮಾಹಿತಿಯನ್ನು ನಂಬುವಂತಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ರಕ್ಷಿಸುವುದಕ್ಕೆ ಕಟ್ಟಡ ಕಾರ್ಮಿಕನನ್ನು ಮುಂದೆ ತರಲಾಗಿದೆ ಎಂದವರು ಹೇಳಿದ್ದಾರೆ. ಈ ಹತ್ಯೆಯ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ