ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು - Mahanayaka
8:28 PM Wednesday 11 - December 2024

ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು

doctor nurse
20/08/2021

ರಾಮ್ ಪುರ: ಸಹೋದ್ಯೋಗಿ ನರ್ಸ್ ಸ್ನಾನ ಮಾಡುತ್ತಿದ್ದ ವೇಳೆ ಚಿತ್ರೀಕರಣ ನಡೆಸಿದ ವೈದ್ಯನೋರ್ವ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ನರ್ಸ್ ಆರೋಪ ಮಾಡಿದ್ದು, ವೈದ್ಯನ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

 ರಾಮ್ ಪುರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತ್ರಸ್ತೆ ಸಹಾಯಕ ನರ್ಸ್ ಹಾಗೂ ಹೆರಿಗೆ ಮಾಡಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನರ್ಸ್ ಈ ಆರೋಪ ಮಾಡಿದ್ದು, ವೈದ್ಯ ತನಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದಾಗಿ ಆರೋಪಿಸಿದ್ದಾರೆ.

ಸಿಹೆಚ್ ಸಿ ವೈದ್ಯರು ನಾನು ಸ್ನಾನ ಮಾಡುತ್ತಿದ್ದ ವಿಡಿಯೋ ಚಿತ್ರೀಕರಿಸಿ ಅದನ್ನು ನನ್ನ ಪತಿಗೆ ತೋರಿಸಿದ್ದರು ಪರಿಣಾಮ ನನಗೆ ಆತ ವಿಚ್ಛೇದನ ನೀಡಿದ್ದ. ವೈದ್ಯರೂ ನನಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ವೈದ್ಯನ ವಿರುದ್ಧ ಐಪಿಸಿ ಸೆಕ್ಷನ್ 376, 506ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ವೈದ್ಯ ವಿವಾಹಿತನಾಗಿದ್ದಾನೆ. ಮೇಲ್ನೋಟಕ್ಕೆ ವೈದ್ಯ ಹಾಗೂ ನರ್ಸ್ ದೈಹಿಕ ಅಕ್ರಮ ಸಂಬಂಧ ಹೊಂದಿದ್ದರು ಎಂದು ಕಂಡು ಬರುತ್ತಿದೆ. ಈ ಬಗ್ಗೆ ಎಲ್ಲ ವಿಧಗಳಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಮಿಲಾಕ್ ನ ಸರ್ಕಲ್ ಅಧಿಕಾರಿ ಓಂಕಾರ್ ನಾಥ್ ಶರ್ಮಾ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ರಾಜೀವ್‍ ಗಾಂಧಿ 77ನೇ ಜನ್ಮ ದಿನಾಚರಣೆ: ವೀರಭೂಮಿಯಲ್ಲಿ ನಮನ ಸಲ್ಲಿಸಿ, ಕಾಲ ಕಳೆದ ರಾಹುಲ್ ಗಾಂಧಿ

ಇಬ್ಬರು ಅಂಗಾಂಗ ದಾನಿಗಳ ದಾನದಿಂದ 14 ಮಂದಿಯ ಪ್ರಾಣ ಉಳಿಯಿತು

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ಹೋಗಿ ಎಂದ ಬಿಜೆಪಿ ನಾಯಕ!

ಮೂರನೇ ಅಲೆ ತಡೆಗಟ್ಟಲು ಕೋವಿಡ್ ಪರೀಕ್ಷೆ ಹೆಚ್ಚಿಸಿ: ಸಚಿವ ಡಾ.ಕೆ.ಸುಧಾಕರ್

ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣವೇ ನಟಿಯ ಬೆಡ್ ರೂಂ ದೃಶ್ಯ ವೈರಲ್ ! | ನಟಿಯ ಪ್ರತಿಕ್ರಿಯೆ ಏನು?

ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕಳ್ಳರ ಕಾಟ | ಕಾರ್ಯಕರ್ತರ ಜೇಬಿಗೆ ಕತ್ತರಿ

ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

ಇತ್ತೀಚಿನ ಸುದ್ದಿ