ನ್ಯಾಯಾಲಯಕ್ಕೆ ಕಾಂಡಮ್ ಪಾರ್ಸೆಲ್ ಮಾಡಿದ ಮಹಿಳೆ! - Mahanayaka
5:29 AM Wednesday 11 - December 2024

ನ್ಯಾಯಾಲಯಕ್ಕೆ ಕಾಂಡಮ್ ಪಾರ್ಸೆಲ್ ಮಾಡಿದ ಮಹಿಳೆ!

17/02/2021

ಅಹ್ಮದಾಬಾದ್: ಮಹಿಳೆಯೊಬ್ಬರು ನ್ಯಾಯಾಲಯಕ್ಕೆ 150 ಕಾಂಡೊಮ್ ಗಳನ್ನು ಕಳುಹಿಸಿ ಕೊಟ್ಟಿದ್ದು, ವಿವಾದಾತ್ಮಕ ತೀರ್ಪು ನೀಡಿರುವುದಕ್ಕೆ ಇದೇ ನನ್ನ ಉತ್ತರ ಎಂದು ಮಹಿಳೆ ಹೇಳಿದ್ದಾರೆ.

ಅಹಮದಾಬಾದ್​ನ ದೇವಶ್ರೀ ತ್ರಿವೇದಿ ಅವರು ವಿವಾದಾತ್ಮಕ ತೀರ್ಪಿನ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದಾತ್ಮಕ ತೀರ್ಪು ನೀಡಿದ್ದ ಪುಷ್ಪಾ ವಿ ಗಣದೇವಾಲಾ ಅವರ ಕೊಠಡಿ ಸೇರಿ ಒಟ್ಟು 12 ವಿಳಾಸಕ್ಕೆ ಕಾಂಡೊಮ್ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ.

ಫೆ.9ರಂದು ತಾನು ಕಾಂಡೋಮ್ ಪಾರ್ಸೆಲ್ ಮಾಡಿದ್ದೇನೆ. ಈಗಾಗಲೇ ಹಲವು ಕಡೆ ಅದು ರಿಸಿವ್ ಆಗಿದೆ ಎಂದು ಸಂದೇಶ ಬಂದಿದೆ ಎಂದು ಅವರು ಹೇಳಿದ್ದಾರೆ.

ಜನವರಿ 19ರಂದು ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿ ಪುಷ್ಪಾ ವಿ ಗಣದೇವಾಲಾ ಅವರು ವಿವಾದಾತ್ಮಕ ತೀರ್ಪನ್ನು ನೀಡಿದ್ದು, ಹೆಣ್ಣು ಮಕ್ಕಳ  ದೇಹವನ್ನು ಬಟ್ಟೆ ಇದ್ದಾಗ ಮುಟ್ಟುವುದು, ಕೈ ಹಿಡಿದು ಪ್ಯಾಂಟ್​ ಜಿಪ್​ ತೆಗೆಯುವುದು, ಕೈ ಹಿಡಿದುಕೊಳ್ಳುವುದು ಲೈಂಗಿಕ ದೌರ್ಜನ್ಯವಲ್ಲ ಎಂದು ಹೇಳಿದ್ದರು.

ಇತ್ತೀಚಿನ ಸುದ್ದಿ