ರಾಜ್ಯದಲ್ಲಿ ಅ.25ರಿಂದ 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭ - Mahanayaka
6:04 AM Thursday 12 - December 2024

ರಾಜ್ಯದಲ್ಲಿ ಅ.25ರಿಂದ 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭ

school open
18/10/2021

ಬೆಂಗಳೂರು:  ಅಕ್ಟೋಬರ್ 25ರಿಂದ ಒಂದನೇ ತರಗತಿಯಿಂದ 5ನೇ ತರಗತಿವರೆಗೆ ಶಾಲೆ ಆರಂಭಿಸುವುದಕ್ಕೆ ಸರ್ಕಾರ ಮುಂದಾಗಿದ್ದು, ಶಾಲೆ ಆರಂಭಕ್ಕೆ ಕೊರೊನಾ ತಾಂತ್ರಿಕ ಸಮಿತಿಯು ಗ್ರೀನ್  ಸಿಗ್ನಲ್ ನೀಡಿದೆ ಎಂದು ತಿಳಿದು ಬಂದಿದೆ.

ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ  1ರಿಂದ 5ನೇ ತರಗತಿವರೆಗೆ ಶಾಲೆ ತೆರೆದಿರಲಿಲ್ಲ. ಇದೀಗ ಕೊರೊನಾ ಪ್ರಕರಣಗಳು ಇಳಿಕೆ ಕಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಶಾಲೆಗಳ ಆರಂಭಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಬಗ್ಗೆ ಮಾತನಾಡಿ, ಶಾಲಾ ಮಕ್ಕಳಿಗೆ ಬರಲು ಯಾವುದೇ ಬಲವಂತ ಮಾಡುವಂತಿಲ್ಲ. ಒಂದು ವಾರದ ಮಟ್ಟಿಗೆ ಶಾಲೆಯ ಅವಧಿಯನ್ನು ಕಡಿಮೆ ಮಾಡಲಾಗುವುದು. ಆ ಬಳಿಕ ಎಂದಿನಂತೆಯೇ ಸಮಯವನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಶಾಲೆ ಆರಂಭವಾಗಿರುವುದಕ್ಕೆ ಪೋಷಕರ ಪ್ರತಿಕ್ರಿಯೆ ಉತ್ತಮವಾಗಿದೆ. ಶಾಲೆ ಆರಂಭಕ್ಕೆ ಮಾರ್ಗ ಸೂಚಿಗಳನ್ನು ನಾಡಿದ್ದು  ಎಲ್ಲ ಶಾಲೆಗಳಿಗೂ ನೀಡಲಾಗುವುದು ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ಮಧ್ಯಪ್ರದೇಶ: 12 ಲಕ್ಷ ಎತ್ತುಗಳ ‘ವೃಷಣ ಬೀಜ’ ಒಡೆಯುವ ಯೋಜನೆಗೆ ಬಿಜೆಪಿ ಸಂಸದೆಯಿಂದಲೇ ವಿರೋಧ

“ತ್ರಿಶೂಲ ಕೊಟ್ರೆ ಮೊದಲ ಬೇಟೆ ನೀನೇ” | ಮಾಜಿ ಸಿಎಂ ಸಿದ್ದರಾಮಯ್ಯಗೆ ಜೀವ ಬೆದರಿಕೆ

BigNews: ಆರೆಸ್ಸೆಸ್ ನ ಹಿರಿಯ ಮುಖಂಡನಿಂದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ

ಜಾತಿನಿಂದನೆ ಪ್ರಕರಣ: ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಮಹಿಳೆಯೊಂದಿಗಿನ ತನ್ನ ಖಾಸಗಿ ಚಿತ್ರವನ್ನು ವಾಟ್ಸಾಪ್ ಗ್ರೂಪ್ ಗೆ ಶೇರ್ ಮಾಡಿದ ಶಿಕ್ಷಕ!

ಪತ್ನಿಯ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಕೌಟುಂಬಿಕ ಜಗಳ ದುರಂತ ಅಂತ್ಯ

 

ಇತ್ತೀಚಿನ ಸುದ್ದಿ