ಒಡಹುಟ್ಟಿದ ಅಣ್ಣನನ್ನೇ ಇರಿದು ಕೊಂದ ತಮ್ಮ - Mahanayaka
10:26 AM Thursday 12 - December 2024

ಒಡಹುಟ್ಟಿದ ಅಣ್ಣನನ್ನೇ ಇರಿದು ಕೊಂದ ತಮ್ಮ

murder
07/03/2022

ಕಾರ್ಕಳ: ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ಜಾಗದ ತಕರಾರಿನ ವೈಷಮ್ಯಕ್ಕೆ ಒಡಹುಟ್ಟಿದ ಅಣ್ಣನನ್ನೇ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಶೇಖರ್‌ (50) ಕೊಲೆಯಾದ ವ್ಯಕ್ತಿ. ಅವರ ಸಹೋದರ ರಾಜು (35) ಕೊಲೆಗೈದ ಆರೋಪಿಯಾಗಿದ್ದಾನೆ. ಶೇಖರ್‌ ಮತ್ತು ರಾಜು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದರು.

ಅಣ್ಣನೊಂದಿಗೆ ವೈಮನಸ್ಸಿನಿಂದ ರಾಜು ಪ್ರತ್ಯೇಕ ಶೆಡ್‌ ನಿರ್ಮಾಣ ಮಾಡಿ ವಾಸವಾಗಿದ್ದ. ಭಾನುವಾರ ಶೇಖರ ಮನೆಯಲ್ಲಿ ಅಂಗಳದ ಕೆಲಸದಲ್ಲಿ ನಿರತನಾಗಿದ್ದರು. ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಮನೆಯಲ್ಲಿ ದುರಸ್ತಿ ಕೆಲಸ ಮಾಡದಂತೆ ಆಕ್ಷೇಪಿಸಿದ್ದ. ಅದಕ್ಕೆ ಶೇಖರ ಕಿವಿಗೊಡದೆ ತನ್ನ ಪಾಡಿಗೆ ಕೆಲಸ ಮುಂದುವರಿಸಿದ್ದರು.

ಈ ವೇಳೆ ಕೊಪಗೊಂಡ ರಾಜು ಚೂರಿ ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡು ಶೇಖರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಸಮುದ್ರದಲ್ಲಿ ಮುಳುಗಿ ಯುವಕ ಸಾವು

ಆಸ್ತಿಗಾಗಿ ತಂದೆಯನ್ನು ಭೀಕರವಾಗಿ ಹತ್ಯೆಗೈದ ಪುತ್ರ: ಬೆಚ್ಚಿ ಬಿದ್ದ ಗ್ರಾಮಸ್ಥರು

ಪ್ರಿಯಕರನ ಜೊತೆ ಕರ್ನಾಟಕಕ್ಕೆ ಬಂದು ಮದುವೆಯಾದ ತಮಿಳುನಾಡು ಸಚಿವರ ಪುತ್ರಿ

ಪ್ರೀತಿಸಿ ಮದುವೆಯಾದ ಯುವತಿಯನ್ನು ಎಳೆದೊಯ್ದ ಪೊಲೀಸರು

ನೊಟೀಸ್ ನೀಡದೆ ಕೃಷಿ ಭೂಮಿ ತೆರವು: ಅರಣ್ಯಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ

 

ಇತ್ತೀಚಿನ ಸುದ್ದಿ