ಒಡಿಶಾ ಭೀಕರ ರೈಲು ಅಪಘಾತ ಪ್ರಕರಣ: ರೈಲಿನಲ್ಲಿ ಪ್ರಯಾಣಿಸಿದ್ದ ಬಿಹಾರದ 19 ಜನ ನಾಪತ್ತೆ
ಪಾಟ್ನಾ: ಕೋರೊಮಂಡಲ್ ರೈಲಿನಲ್ಲಿ ಪ್ರಯಾಣಿಸಿದ್ದ ಬಿಹಾರದ 19 ಮಂದಿ ಬಾಲೇಶ್ವರದ ಸಮೀಪದಲ್ಲಿ ನಡೆದ ಭೀಕರ ರೈಲು ಅಪಘಾತದ ವೇಳೆ ನಾಪತ್ತೆಯಾಗಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಒಡಿಶಾ ಭೀಕರ ರೈಲು ಅಪಘಾತದಲ್ಲಿ 288 ಸಾವನ್ನಪ್ಪಿದ್ದಾರೆ. ಇದೇ ರೈಲಿನಲ್ಲಿ ಪ್ರಯಾಣಿಸಿದ್ದ ಬಿಹಾರದ 19 ಜನರು ನಾಪತ್ತೆಯಾಗಿದ್ದು, ನಾಪತ್ತೆಯಾದವರಲ್ಲಿ ಬಿಹಾರದ ಮಧುಬನಿ ಜಿಲ್ಲೆಯ ನಾಲ್ವರು, ದರ್ಭಾಂಗ, ಮುಝಾಫರ್ ಪುರ, ವೆಸ್ಟ್ ಚಂಪಾರಣ್, ಸಮಸ್ತಿಪುರ ಜಿಲ್ಲೆಗಳಿಂದ ಎರಡೆರಡು ಮಂದಿ ಹಾಗೂ ಸಿತಾಮರ್ಹಿ, ಪಾಟ್ನಾ, ಗಯಾ, ಪೂರ್ಣೀಯಾ, ಶೇಖ್ ಪುರ್, ಸಿವಾನ್, ಬೇಗುಸರಾಯ್ ಜಿಲ್ಲೆಗಳಿಂದ ಒಬ್ಬೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಡಿಎಂಡಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಬಿಹಾರ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳ ತಂಡವನ್ನು ಒಡಿಶಾಕ್ಕೆ ಕಳುಹಿಸಲಾಗಿದೆ. ಅಪರಿಚಿತರ ಮೃತದೇಹಗಳ ಗುರುತು ಖಚಿತಪಡಿಸಲು ಒಡಿಶಾ ಸರ್ಕಾರ ಎಲ್ಲ ಸಹಕಾರ ನೀಡುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw