ಅಧಿಕೃತ ಮಾಹಿತಿ: ಕೆ.ಶಿವರಾಮ್ ಇನ್ನಿಲ್ಲ: ಅವರಿಗೆ ಏನಾಗಿತ್ತು?: ಅಳಿಯ ಪ್ರದೀಪ್ ಮಾಹಿತಿ

ಬೆಂಗಳೂರು: ಕಳೆದ 20 ದಿನಗಳಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ.ಶಿವರಾಮ್ ಅವರು ಇಂದು ಸಂಜೆ 4:18ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಕೆ.ಶಿವರಾಮ್ ಅವರ ಅಳಿಯ ಮಾಹಿತಿ ನೀಡಿದ್ದಾರೆ.
ಕೆ.ಶಿವರಾಮ್ ಅವರ ನಿಧನವನ್ನು ದೃಢಪಡಿಸಿದ ಅವರು, ಸುಮಾರು 20 ದಿವಸಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ರು. ಇಂದು ನಾಲ್ಕು ಗಂಟೆ 18 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದರು.
ಕನ್ನಡದಲ್ಲಿ ಫಸ್ಟ್ ಟೈಮ್ ಐಎಎಸ್ ಪಾಸ್ ಆದ ವ್ಯಕ್ತಿ ಇವತ್ತು ನಮ್ಮ ಜೊತೆಗಿಲ್ಲ ಅಂತ ಹೇಳಲು ತುಂಬಾ ಬೇಜಾರಾಗ್ತಿದೆ ಎಂದು ಕಂಬನಿ ಮಿಡಿದರು.
ಆಸ್ಪತ್ರೆಯಿಂದ ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ, ನಾಳೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3-4 ಗಂಟೆಯವರೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಿಪಿ ಸಮಸ್ಯೆಯಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ವಿ ಕಾರ್ಡಿಯಾಕ್ ಅರೆಸ್ಟ್ ಆಗಿ 6 ದಿನವಾಗಿತ್ತು. ಇವತ್ತು ಮತ್ತೊಮ್ಮೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎಂದು ಅವರು ಮಾಹಿತಿ ನೀಡಿದರು.