ಮಾಸ್ಕ್ ಹಾಕದೇ ಬರಬೇಡಿ” ಎಂದಿದ್ದಕ್ಕೆ ಒಳ ಉಡುಪು ತೆಗೆದು ಈ ಮಹಿಳೆ ಮಾಡಿದ್ದೇನು ಗೊತ್ತಾ? - Mahanayaka
1:03 PM Thursday 12 - December 2024

ಮಾಸ್ಕ್ ಹಾಕದೇ ಬರಬೇಡಿ” ಎಂದಿದ್ದಕ್ಕೆ ಒಳ ಉಡುಪು ತೆಗೆದು ಈ ಮಹಿಳೆ ಮಾಡಿದ್ದೇನು ಗೊತ್ತಾ?

27/02/2021

ಕೊರೊನಾ ಹಾವಳಿಯು ಇನ್ನೂ ಹಾಗೆಯೇ ಇದ್ದರೂ ಕೂಡ, ವಿಶ್ವದಾದ್ಯಂತ ಕೊರೊನಾದ ಬಗ್ಗೆ ಇರುವ ಭಯ ಹೋಗಿದೆ. ಹೀಗಾಗಿ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆಯೇ ಜನರು ಓಡಾಡುತ್ತಿದ್ದಾರೆ. ಸೂಪರ್ ಮಾರ್ಕೆಟ್ ನಲ್ಲಿ ಮಹಿಳೆಯೊಬ್ಬರು ಮಾಸ್ಕ್ ಇಲ್ಲದೇ ಓಡಾಡಿದ್ದು, ಇದರ ಪರಿಣಾಮ ಏನಾಗಿದೆ ಗೊತ್ತಾ?

ಈ ಘಟನೆ ದಕ್ಷಿಣ ಆಫ್ರಿಕಾದ ಸೂಪರ್ ಮಾರ್ಕೆಟ್ ವೊಂದರಲ್ಲಿ ನಡೆದಿದ್ದು, ಮಾಸ್ಕ್ ಧರಿಸದೇ ಮಹಿಳೆಯೊಬ್ಬರು ಸೂಪರ್ ಮಾರ್ಕೆಟ್ ಗೆ ಬಂದಿದ್ದಾರೆ. ಈ ವೇಳೆ ಮಾಸ್ಕ್ ಧರಿಸದಿದ್ದರೆ, ಮಾರ್ಕೆಟ್ ಒಳಗೆ ಬರುವಂತಿಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಮಹಿಳೆಗೆ ಹೇಳಿದ್ದಾನೆ.

ಈ ವೇಳೆ ಏಕಾಏಕಿ ಮಹಿಳೆ ತನ್ನ ಒಳ ಉಡುಪು ತೆಗೆದು ಮಾಸ್ಕ್ ನಂತೆ ಹಾಕಿಕೊಂಡಿದ್ದಾಳೆ. ಈ ವೇಳೆ ಸಮೀಪ ಇದ್ದವರು, “ಅಯ್ಯೋ ದೇವರೇ… ಇಲ್ಲಿ ಏನು ನಡೆಯುತ್ತಿದೆ?” ಎಂದು ಬೊಬ್ಬೆ ಹಾಕಿದ್ದಾರೆ. ಆದರೆ ಮಹಿಳೆ ಯಾವುದಕ್ಕೂ ಕ್ಯಾರೇ ಮಾಡಲಿಲ್ಲ.

ಇನ್ನೂ ಇದೇ ವೇಳೆ ಇನ್ನೊರ್ವಳು ಮಹಿಳೆ ಈ ಮಹಿಳೆಯನ್ನು ಬೆಂಬಲಿಸಿದ್ದು,  ಆಕೆ ಈ ರೀತಿಯ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಒಳ ಉಡುಪಿನಲ್ಲಿರುವ ಬ್ಯಾಕ್ಟೀರಿಯಾಗಳಿಗಿಂತ ಹೆಚ್ಚು ಮಾಸ್ಕ್ ನಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.

https://twitter.com/YB_JLN/status/1364253718904979462?s=20

ಇತ್ತೀಚಿನ ಸುದ್ದಿ