ಖಾಸಗಿ ಅಂಗ, ಒಳ ಉಡುಪುಗಳಲ್ಲೂ ಚಿನ್ನಸಾಗಾಟ: ವಿಮಾನ ನಿಲ್ದಾಣದಲ್ಲಿ ಐವರನ್ನು ವಶಕ್ಕೆ ಪಡೆದ ಅಧಿಕಾರಿಗಳು
ಐವರು ಪ್ರಯಾಣಿಕರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 86.09 ಲಕ್ಷ ಮೌಲ್ಯದ 1703ಗ್ರಾಂ ಚಿನ್ನವನ್ನು ವಶಕ್ಕೆ ಪಡೆದ ಘಟನೆ ಮಂಗಳೂರು ಏರ್ ಪೋರ್ಟ್ ನ ನಡೆದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಾಟ ಮಾಡಲೆತ್ನಿಸಿದ ಕಾಸರಗೋಡು, ಭಟ್ಕಳ ಮತ್ತು ಟ್ರಿವೇಂಡ್ರಂ ಮೂಲದ ಐವರನ್ನು ಅಧಿಕಾರಿಗಳು ವಶಕ್ಕೆ ಪಡೆಸಿದ್ದಾರೆ.
ದುಬೈ ಮತ್ತು ಮಸ್ಕತ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು, ಮಿಕ್ಸರ್ ಗ್ರೈಂಡರ್‌ನ ಮೋಟಾರಿನ ಒಳಭಾಗದಲ್ಲಿ, ಗುದನಾಳದಲ್ಲಿ ಮತ್ತು ಬಣ್ಣ ಲೇಪಿತ ಸುರುಳಿಯ ರೂಪದಲ್ಲಿ, ಒಳಉಡುಪುಗಳ ಒಳಗೆ ಗಮ್ ನೊಂದಿಗೆ ಬೆರೆಸಿದ ಪೇಸ್ಟ್/ಪೌಡರ್ ರೂಪದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು .
ಎಲ್ಲಾ ಐವರು ಆರೋಪಿಗಳನ್ನು ಬಂಧಿಸಿ 24 ಕ್ಯಾರೆಟ್ ನ 86.09 ಲಕ್ಷ ರೂ. ಮೌಲ್ಯದ 1,703 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ವಿಚಾರಣೆ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka