ಇದು ಒಳಗೆ ನಡೆಯುತ್ತಿರುವ ಪಿತೂರಿ, ಹೊರಗಿನದ್ದಲ್ಲ: ಮಠಕ್ಕೆ ಆಗಮಿಸಿದ ಮುರುಗಶರಣ ಶ್ರೀ
ಚಿತ್ರದುರ್ಗ: ಯಾವುದೇ ಪಲಾಯನವಾದವಿಲ್ಲ, ಈ ನೆಲದ ಕಾನೂನನ್ನು ಗೌರವಿಸುತ್ತೇವೆ. ಈ ಪಿತೂರಿಗಳು ಒಳಗಿಂದ ನಡೆಯುತ್ತಿರುವುದು, ಇದೀಗ ಹೊರಗಡೆ ಬಂದಿದೆ ಎಂದು ಮುರುಗ ಮಠದ ಮುರುಗಶರಣ ಶ್ರೀ ಹೇಳಿದರು.
ಇಂದು ಸ್ವಾಮೀಜಿಯನ್ನು ಹಾವೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದ ಬಳಿಕ ಮಠಕ್ಕೆ ಆಗಮಿಸಿದ ಅವರು, ಭಕ್ತರು ಹಾಗೂ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದರು.
ನೀವು ಯಾರೂ ಆತಂಕಕ್ಕೆ ಒಳಗಾಗಬೇಡಿ, ಧೈರ್ಯ, ಸಹನೆ ಬುದ್ಧಿವಂತಿಕೆಯಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡೋಣ ಎಂದು ಮುರುಗಶ್ರೀ ಹೇಳಿದರು.
ಈ ನೆಲದ ಕಾನೂನನ್ನು ಗೌರವಿಸುತ್ತೇವೆ. ಗಟ್ಟಿ ಸ್ಥಾನದಲ್ಲಿ ನಿಂತು ನಾವು ಈ ಮಾತು ಹೇಳುತ್ತಿದ್ದೇವೆ. ಗಾಳಿ ಸುದ್ದಿಗಳನ್ನು ಯಾರೂ ನಂಬಬೇಡಿ. ಈಗ ಅಹಿತಕರ ಸಂದರ್ಭ ಇದೆ. ಇದರಿಂದ ಹೊರ ಬರುತ್ತೇವೆ. ನಮ್ಮ ಸಂಕಷ್ಟದ ಜೊತೆಗೆ ಲಕ್ಷೋಪಲಕ್ಷ ಜನರು ನಮ್ಮ ಜೊತೆಗೆ ನಿಂತಿದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka