ಆಮ್ಲೆಟ್ ಮಾಡಿಕೊಡಲಿಲ್ಲ ಎಂದು ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ
ಬಿಹಾರ: ನಿವೃತ್ತ ಸಬ್ ಇನ್ಸ್ಪೆಕ್ಟರ್ ಮಗನೊಬ್ಬ ಆಮ್ಲೆಟ್ ಮಾಡಿಕೊಡಲಿಲ್ಲ ಎಂದು ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ನಡೆದಿದೆ.
ನೀತು ಸಿಂಗ್ ಮೃತ ಮಹಿಳೆ. ನಿವೃತ್ತ ಸಬ್ ಇನ್ಸ್ಪೆಕ್ಟರ್ ಮಗ ಅಜಿತ್ ಸಿಂಗ್ ಎಂಬಾತ ಈ ಕೃತ್ಯವನ್ನೆಸಗಿದ್ದು, ಪತ್ನಿಯನ್ನು ಕೊಂದ ನಂತರ ದೇಹವನ್ನು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.
ವಿಪರೀತ ಮದ್ಯವಸನಿಯಾಗಿದ್ದ ಅಜಿತ್ ಸಿಂಗ್, ಎಂದಿನಂತೆ ರಾತ್ರಿ ಕುಡಿದು ಮನೆಗೆ ಬಂದಿದ್ದ ಅಲ್ಲದೆ, ಮನೆಗೆ ಮೊಟ್ಟೆ ತಂದಿದ್ದ. ನಂತರ ಪತ್ನಿಗೆ ಆಮ್ಲೆಟ್ ಮಾಡಿಕೊಡಲು ಹೇಳಿದ್ದಾನೆ. ಈ ವೇಳೆ ಪತ್ನಿ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಅಜಿತ್ ಸಿಂಗ್ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕತ್ತುಹಿಸುಕಿ ಕೊಂದಿದ್ದಾನೆ. ಯಾವುದೇ ಶಬ್ಧ ಬಾರದ ಹಿನ್ನಲೆಯಲ್ಲಿ ತಂದೆ ಜಗಳ ನಿಂತಿರಬಹುದೆಂದುಕೊಂಡು ಸುಮ್ಮನಾಗಿದ್ದರು. ಬೆಳಗ್ಗೆ ನೋಡಿದರೆ ನೀತು ಸಿಂಗ್ ಶವ ಫ್ಯಾನ್ನಲ್ಲಿ ನೇತಾಡುತ್ತಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಂದಿಬೆಟ್ಟದಿಂದ ಬೆಟ್ಟದಿಂದ ಜಾರಿ ಬಿದ್ದ ಯುವಕ: ಅಗ್ನಿ ಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ
ಒಂದೇ ಕುಟುಂಬದ ಮೂವರ ಸಜೀವ ದಹನ ಪ್ರಕರಣ: 9 ಮಂದಿ ಆರೋಪಿಗಳ ಬಂಧನ
ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಮೂವರ ಆರೋಪಿಗಳ ಬಂಧನ, 28 ಮಹಿಳೆಯರ ರಕ್ಷಣೆ