ವಿರೋಧ ಪಕ್ಷಗಳ ಮೈತ್ರಿಕೂಟದ ಮೊದಲ ಸಮನ್ವಯ ಸಮಿತಿ ಸಭೆ: ಮೀಟಿಂಗ್ ನಲ್ಲಿ ಏನೇನ್ ಚರ್ಚೆ ಆಯಿತು..? - Mahanayaka
5:37 PM Friday 20 - September 2024

ವಿರೋಧ ಪಕ್ಷಗಳ ಮೈತ್ರಿಕೂಟದ ಮೊದಲ ಸಮನ್ವಯ ಸಮಿತಿ ಸಭೆ: ಮೀಟಿಂಗ್ ನಲ್ಲಿ ಏನೇನ್ ಚರ್ಚೆ ಆಯಿತು..?

14/09/2023

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ನಿವಾಸದಲ್ಲಿ INDIA ಮೊದಲ ಸಮನ್ವಯ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆ ಮತ್ತು ಜಾತಿ-ಗಣತಿ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಈ ಸಭೆಯಲ್ಲಿ 12 ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ತೃಣಮೂಲ ಕಾಂಗ್ರಸ್‌ (ಟಿಎಂಸಿ) ಪಕ್ಷದ ಅಭಿಷೇಕ್‌ ಬ್ಯಾನರ್ಜಿ ಅವರು ಜಾರಿ ನಿರ್ದೇಶನಾಲಯದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಇನ್ನು ಈ ಸಭೆಯ ನಂತರ ಇಂಡಿಯಾ ಮೈತ್ರಿಕೂಟದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಕೆ.ಸಿ ವೇಣುಗೋಪಾಲ್‌, ಅಕ್ಟೋಬರ್‌ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ ವಿಪಕ್ಷಗಳ ಜಂಟಿ ರ‍್ಯಾಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಮನ್ವಯ ಸಮಿತಿಯು ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಬಗ್ಗೆ ಸದಸ್ಯ ಪಕ್ಷಗಳು ಆದಷ್ಟು ಬೇಗ ನಿರ್ಧಾರಕ್ಕೆ ಬರಲು ಚರ್ಚೆಯಲ್ಲಿ ತೊಡಗಲು ನಿರ್ಧರಿಸಲಾಗಿದೆ ಅಂದರು.


Provided by

ಮೊದಲ ರ‍್ಯಾಲಿಯಲ್ಲಿ ಹಣದುಬ್ಬರ, ನಿರುದ್ಯೋಗ ಹಾಗೂ ಬಿಜೆಪಿಯ ಭ್ರಷ್ಟಾಚಾರದ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುಂಬೈನಲ್ಲಿ ನಡೆದ ತನ್ನ ಮೂರನೇ ಸಭೆಯಲ್ಲಿ ಇಂಡಿಯಾ 14 ಸದಸ್ಯರ ಸಮನ್ವಯ ಸಮಿತಿಯನ್ನು ಘೋಷಿಸಿತು. ಎನ್‌ಡಿಎ ಆಡಳಿತದಲ್ಲಿ ದೇಶವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಒಮ್ಮತದ ನಿಲುವುಗಳನ್ನು ವಿಕಸನಗೊಳಿಸುವ ಕಾರ್ಯವನ್ನು ಸಮಿತಿಯು ಹೊಂದಿದೆ. ಪ್ರಚಾರ ನಿರ್ವಹಣೆಗಾಗಿ ನವದೆಹಲಿಯಲ್ಲಿ ಸಾಮಾನ್ಯ ಕಾರ್ಯದರ್ಶಿಯನ್ನು ಸಹ ಸ್ಥಾಪಿಸುತ್ತದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ