ನಾಳೆ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ; ಗೆಲುವು ಯಾರಿಗೆ?
09/11/2020
ಪಾಟ್ನಾ: ನಾಳೆ(ನ.10) ಬಿಹಾರ ವಿಧಾನಸಭಾ ಚುನಾವಣಾ ಮತ ಎಣಿಕೆ ನಡೆಯಲಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 55 ಮತ ಎಣಿಕಾ ಕೇಂದ್ರಗಳಿದ್ದು, ಬಿಹಾರದಲ್ಲಿ 3 ಹಂತಗಳಲ್ಲಿ ನಡೆದ ಮತದಾನದಲ್ಲಿ ಶೇ.56.19ರಷ್ಟು ಮತದಾನವಾಗಿದೆ. ಇದು ಈ ಹಿಂದೆಂದಿಗಿಂತಲೂ ಹೆಚ್ಚು ಮತದಾನ ಎಂದು ಹೇಳಲಾಗಿದೆ.
ಫಲಿತಾಂಶ ಹೊರ ಬೀಳುವ ಮೊದಲೇ, ಸಮೀಕ್ಷೆಗಳು ಹೊರ ಬಿದ್ದಿದ್ದು, ಆರ್ ಜೆಡಿ, ಕಾಂಗ್ರೆಸ್ ಮತ್ತು ಎಡ ಮೈತ್ರಿಕೂಟ ಭರ್ಜರಿ ಗೆಲುವು ಪಡೆಯಲಿದೆ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ನಾಳೆ ಮತ ಎಣಿಕೆ ಇರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳು ತಮ್ಮ ಕಾರ್ಯಕರ್ತರಿಗೆ ಶಿಸ್ತುಪಾಲಿಸುವಂತೆ ಹೇಳಿದೆ.
ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಕಾರ್ಯಕರ್ತರಿಗೆ , ಎಲ್ಲರೂ ಶಿಸ್ತುಪಾಲಿಸಿ, ಫಲಿತಾಂಶ ಏನೇ ಬರಲಿ, ಯಾವುದೇ ಕಾರ್ಯಕರ್ತರು ಪಟಾಕಿ ಹಚ್ಚುವುದು, ಶಾಂತಿ ಕದಡುವುದು ಮಾಡಬಾರದು, ವಿಜಯದ ಉತ್ಸಾಹದಲ್ಲಿ , ಅವಿವೇಕತನದಿಂದ ವರ್ತಿಸಬಾರದು ಎಂದು ಟ್ವೀಟ್ ಮಾಡಿದ್ದಾರೆ.