ಅಯ್ಯೋ ದುರಾವಸ್ಥೆಯೇ..! | ಒಂದೇ ಆಂಬುಲೆನ್ಸ್ ನಲ್ಲಿ 22 ಮೃತದೇಹಗಳ ಸಾಗಾಟ - Mahanayaka

ಅಯ್ಯೋ ದುರಾವಸ್ಥೆಯೇ..! | ಒಂದೇ ಆಂಬುಲೆನ್ಸ್ ನಲ್ಲಿ 22 ಮೃತದೇಹಗಳ ಸಾಗಾಟ

ambulence
27/04/2021

ಮುಂಬೈ: ಕೊವಿಡ್ ನಿಂದ ಮೃತಪಟ್ಟ 22 ಮಂದಿಯ ಮೃತದೇಹವನ್ನು ಒಂದೇ ಆಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ರವಾನೆ ಮಾಡಿರುವ ಘಟನೆ ಮಹಾರಾಷ್ಟ್ರದ ಬೀಡ್ ನಲ್ಲಿ ನಡೆದಿದೆ.

ಇಲ್ಲಿನ ಜಿಲ್ಲಾಡಳಿತ,  ಮೃತದೇಹ ಸಾಗಿಸಲು ವಾಹನಗಳ ಕೊರತೆ ಇದೆ ಎನ್ನುವ ನೆಪ ಹೇಳಿ ಒಂದೇ ಆಂಬುಲೆನ್ಸ್ ನಲ್ಲಿ ಸರಕು ಸಾಗಿಸಿದಂತೆ ಮೃತದೇಹಗಳನ್ನು ಸಾಗಿಸಿದೆ. ಆಸ್ಪತ್ರೆಯಲ್ಲಿ ಸಾಕಷ್ಟು ಆಂಬುಲೆನ್ಸ್ ಇಲ್ಲದ ಕಾರಣ  ಈ ರೀತಿ ಮಾಡಲಾಗಿದೆ ಎಂದು ಕಾಲೇಜಿನ ಡೀನ್ ಡಾ.ಶಿವಾಜಿ ಸುಕ್ರೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ವರ್ಷ ಕೋವಿಡ್-19 ಮೊದಲ ಅಲೆಯಲ್ಲಿ 5 ಆಂಬುಲೆನ್ಸ್ ಗಳಿದ್ದವು, ಈ ಪೈಕಿ 3 ಆಂಬುಲೆನ್ಸ್ ಗಳನ್ನು ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ವಾಪಸ್ ತೆಗೆದುಕೊಳ್ಳಲಾಯಿತು. ಈಗ ಆಸ್ಪತ್ರೆ ಕೇವಲ 2 ಆಂಬುಲೆನ್ಸ್ ಗಳೊಂದಿಗೆ ನಿರ್ವಹಣೆ ಮಾಡುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.

ಇತ್ತೀಚಿನ ಸುದ್ದಿ