ಒಂದೇ ಆಂಬುಲೆನ್ಸ್ ನಲ್ಲಿ ಏಕಕಾಲಕ್ಕೆ 3 ಮೃತದೇಹಗಳನ್ನು ಸಾಗಿಸಿದ ಖಾಸಗಿ ಆಸ್ಪತ್ರೆ!
16/04/2021
ಬೆಂಗಳೂರು: ನಗರದ ಕೆಂಗೇರಿ ವಿದ್ಯುತ್ ಚಿತಾಗಾರಕ್ಕೆ ಖಾಸಗಿ ಆಸ್ಪತ್ರೆಯೊಂದು ಒಂದೇ ಆಂಬುಲೆನ್ಸ್ ನಲ್ಲಿ ಮೂರು ಮೃತದೇಹಗಳನ್ನು ಸಾಗಿಸಲಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇದೀಗ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊರೊನಾದಿಂದ ಮೃತಪಡುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ಆಸ್ಪತ್ರೆಗಳು ಕೂಡ ವಿಕೃತಿ ಮೆರೆಯುತ್ತಿದೆ. ಒಂದೇ ಆಂಬುಲೆನ್ಸ್ ನಲ್ಲಿ ಸರಕು ಸಾಗಿಸಿದಂತೆ ಮೂರು ಮೃತದೇಹಗಳನ್ನು ಸಾಗಿಸಲಾಗಿದೆ ಎಂದು ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಒಂದೇ ಆಂಬುಲೆನ್ಸ್ ನಲ್ಲಿ ಮೂರು ಮೃತದೇಹಗಳು ಬಂದಿವೆ ಎಂದು ವಿದ್ಯುತ್ ಚಿತಾಗರದ ಸಿಬ್ಬಂದಿ ಹೇಳಿದ್ದಾರೆ ಎಂದು ಹೇಳಲಾಗಿದ್ದು, ಈ ವರದಿ ಮಾಧ್ಯಮಗಳಿಗೆ ದೊರೆಯುತ್ತಿದ್ದಂತೆಯೇ ಸಾರ್ವಜನಿಕರು ಕೂಡ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.