ಸಂಕ್ರಾಂತಿ ಟೂರ್ | ಒಂದೇ ಬ್ಯಾಚ್ ನ 11 ಹಳೆಯ ವಿದ್ಯಾರ್ಥಿಗಳು ಒಂದೇ ದಿನ ಅಪಘಾತಕ್ಕೆ ಬಲಿಯಾದರು - Mahanayaka

ಸಂಕ್ರಾಂತಿ ಟೂರ್ | ಒಂದೇ ಬ್ಯಾಚ್ ನ 11 ಹಳೆಯ ವಿದ್ಯಾರ್ಥಿಗಳು ಒಂದೇ ದಿನ ಅಪಘಾತಕ್ಕೆ ಬಲಿಯಾದರು

15/01/2021

ಧಾರವಾಡ: ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದ್ದು,ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸಂಕ್ರಾಂತಿ ಮುಗಿಸಿದ ಬಳಿಕ ದಾವಣಗೆರೆ ಸೆಂಟ್ ಪೌಲ್ಸ್ ಕಾನ್ವೆಂಟ್ ನ ಒಂದೇ ಬ್ಯಾಚ್ ನ  ಹಳೆಯ ವಿದ್ಯಾರ್ಥಿಗಳು ಒಟ್ಟಿಗೆ ಟೂರ್ ಹೊರಟಿದ್ದರು.


Provided by

ಪೂರ್ಣಿಮಾ, ವೀಣಾ, ಆಶಾ ಜಗದೀಶ್, ಮಾನಸಿ, ಪರಂಜ್ಯೋತಿ, ರಾಜೇಶ್ವರಿ ಶಿವಕುಮಾರ್, ಶಕುಂತಲಾ, ಉಷಾ, ವೇದಾ, ನಿರ್ಮಲಾ, ಮಂಜುಳಾ ನೀಲೇಶ್, ಪ್ರೀತಿ ರವಿಕುಮಾರ್ ಸೇರಿದಂತೆ 11 ಮಹಿಳೆಯರು ಹಾಗೂ ಇಬ್ಬರು ಪುರುಷರಾದ ಡ್ರೈವರ್ ಹಾಗೂ ಕ್ಲಿನರ್ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರ ಪೈಕಿ, ಮಾಜಿ ಶಾಸಕ ಗುರುಸಿದ್ದನಗೌಡ ಅವರ ಸೊಸೆ ಹಾಗೂ ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ ಅವರ ಪತ್ನಿ ಪ್ರೀತಿ ರವಿಕುಮಾರ, ಸ್ತ್ರೀ ರೋಗ ತಜ್ಞೆ ಡಾ.ವೀಣಾ ಪ್ರಕಾಶ್, ಎಸ್.ಎಸ್.ಬಡಾವಣೆಯ ಮಾನಸಿ ಹಾಗೂ ಅವರ ಪುತ್ರಿ ರಶ್ಮಿತಾ ಹಾಗೂ ಸಿದ್ದವೀರಪ್ಪ ಬಡಾವಣೆ ನಿವಾಸಿ ವರ್ಷಿತಾ, ದಾವಣಗೆರೆ ಬಾಲಾಜಿ ರೈಸ್ ಮಿಲ್ ಮಾಲಕಿ ರಜನಿ ಕೂಡ ಮೃತಪಟ್ಟಿದ್ದಾರೆ.


Provided by

ಇಟ್ಟಿಗಟ್ಟಿ ಬಳಿ ನಡೆದ ಅಪಘಾತ ರಾಷ್ಟ್ರದ ಗಮನ ಸೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಸಂಬಂಧ ಸಂತಾಪ ಸೂಚಿಸಿದ್ದು, ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ