ಒಂದೇ ದೇಹ, ಎರಡು ತಲೆ ಹೊಂದಿದ ಅಪರೂಪದ ಸಯಾಮಿ ಶಿಶು ಜನನ
ಭೋಪಾಲ್: ಮಹಿಳೆಯೊಬ್ಬರು ಎರಡು ತಲೆ ಮತ್ತು ಒಂದೇ ದೇಹ ಹೊಂದಿರುವ ಅಪರೂಪದ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್‍ನಲ್ಲಿ ನಡೆದಿದೆ.
ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಂತಹ ಪ್ರಕರಣಗಳು ಅಪರೂಪ ಮತ್ತು ಶಿಶುಗಳ ಸ್ಥಿತಿಯು ವಿಶೇಷವಾಗಿ ಆರಂಭಿಕ ದಿನಗಳಲ್ಲಿ ಅನಿಶ್ಚಿತವಾಗಿರುತ್ತದೆ. ಹೀಗಾಗಿ ಮಗುವನ್ನು ನಿಗಾದಲ್ಲಿ ಇರಿಸಿದ್ದೇವೆ. ಸದ್ಯಕ್ಕೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಯೋಚಿಸಿಲ್ಲ ಎಂದು ಇಂದೋರ್‌ನ ಎಂವೈ ಆಸ್ಪತ್ರೆಯ ಮಕ್ಕಳ ವಿಶೇಷ ತಜ್ಞ ಡಾ.ಬ್ರಿಜೇಶ್ ಲಹೋಟಿ ಮಾಧ್ಯಮಗಳಿಗೆ ತಿಳಿಸಿದರು.
ಸೋಜಿಗದ ಸಯಾಮಿನಲ್ಲಿ ಒಂದು ರೀತಿ ಎರಡು ತಲೆಗಳನ್ನು ಅಕ್ಕಪಕ್ಕದಲ್ಲಿ ಹೊಂದಿರುವ ಅಪರೂಪದ ಅವಳಿ ರೂಪವಾಗಿರುತ್ತಾರೆ. ಇದನ್ನು ಡೈಸೆಫಾಲಿಕ್ ಪ್ಯಾರಾಪಾಗಸ್ ಎಂದು ಕರೆಯುತ್ತಾರೆ.
ಮಾಹಿತಿಯ ಪ್ರಕಾರ, ನೀಮ್ ಚೌಕ್‌ನ ನಿವಾಸಿಯಾಗಿದ್ದ ಮಹಿಳೆಗೆ ಅಲ್ಟ್ರಾಸೌಂಡ್ ನಡೆಸಿದ ವೇಳೆ, ಅವಳಿ ಮಕ್ಕಳಿದ್ದಾರೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಈ ಸ್ಥಿತಿಯ ಬಗ್ಗೆ ವಿವರಿಸಿರಲಿಲ್ಲ ಎಂದು ದೂರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಗಾಂಜಾ ಸಹಿತ ಆರೋಪಿಯ ಬಂಧನ
ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತನಿಗೆ ಬಹಿರಂಗವಾಗಿ ಬೆದರಿಕೆಯೊಡ್ಡಿದ ಯೋಗ ಗುರು ರಾಮದೇವ್
ವೇದಿಕೆಯಲ್ಲಿಯೇ ಕೊಳ್ಳೇಗಾಲದ ಮುಂದಿನ ಅಭ್ಯರ್ಥಿಯನ್ನು ಘೋಷಿಸಿದ ಯಡಿಯೂರಪ್ಪ
ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ: ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಪೊಲೀಸ್ ವಶಕ್ಕೆ