ಒಬ್ಬ ಮಗನ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುವ ವೇಳೆ ಮತ್ತೋರ್ವ ಮಗ ಕೊರೊನಾಕ್ಕೆ ಬಲಿ
![covid 19](https://www.mahanayaka.in/wp-content/uploads/2021/05/covid-19-2.jpg)
12/05/2021
ನೋಯ್ಡಾ: ಒಂದೇ ಕುಟುಂಬದ ಇಬ್ಬರು ಮಕ್ಕಳು ಒಬ್ಬರ ಹಿಂದೊಬ್ಬರಂತೆ ಕೊರೊನಾಕ್ಕೆ ಬಲಿಯಾದ ಘಟನೆ ನೋಯ್ಡಾ ಪಶ್ಚಿಮದ ಜಲಾಲ್ ಪುರ ಗ್ರಾಮದಲ್ಲಿ ನಡೆದಿದ್ದು, ಬೆಳೆದು ನಿಂತಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬ, ಸಹಿಸಲಾಗದ ನೋವಿನಿಂದ ಮೌನ ರೋದನೆಗೆ ಶರಣಾಗಿದೆ.
ಇಲ್ಲಿನ ಜಲಾಲ್ ಪುರ ಗ್ರಾಮದ ಉತರ ಸಿಂಗ್ ಎಂಬವರ ಪುತ್ರ ಪಂಕಜ್ ಇದ್ದಕ್ಕಿದ್ದಂತೆಯೇ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಇದರಿಂದ ತೀವ್ರ ನೋವಿಗೊಳಗಾದ ಕುಟುಂಬ ದುಃಖದಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದಾರೆ. ಅಂತ್ಯ ಕ್ರಿಯೆ ಮುಗಿದ ಮನೆಗೆ ಬರುಷ್ಟರಲ್ಲಿ ಮತ್ತೋರ್ವ ಮಗ ದೀಪಕ್ ಕೊರೊನಾಕ್ಕೆ ಬಲಿಯಾಗಿದ್ದಾನೆ.
ಓರ್ವ ಮಗನನ್ನು ಕಳೆದುಕೊಂಡ ದುಃಖದಲ್ಲಿರುವಾಗಲೇ ಮತ್ತೋರ್ವ ಮಗ ಸಾವನ್ನಪ್ಪಿದ್ದರಿಂದ ಇಡೀ ಕುಟುಂಬಕ್ಕೆ ಆಘಾತವಾಗಿದೆ. ಇದೇ ಗ್ರಾಮದಲ್ಲಿ ಕಳೆದ 10 ದಿನಗಳನ್ನು 18 ಮಂದಿ ಸಾವನ್ನಪ್ಪಿದ್ದು, ಹಳ್ಳಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.