ಪ್ರೀತಿಸಿ ವಿವಾಹವಾಗಿದ್ದ ದಂಪತಿ ಕೊರೊನಾಕ್ಕೆ ಬಲಿ | ಸಾವಿನಲ್ಲೂ ಒಂದಾದ ಪತಿ-ಪತ್ನಿ
23/05/2021
ಚಾಮರಾಜನಗರ: ಪ್ರೀತಿಸಿ ಮದುವೆಯಾಗಿದ್ದ ಪತಿ-ಪತ್ನಿ ಸಾವಿನಲ್ಲೂ ಒಂದಾಗಿದ್ದು, ಒಂದೇ ದಿನ ಪತಿ-ಪತ್ನಿ ಕೊರೊನಾಕ್ಕೆ ಬಲಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
51 ವರ್ಷ ವಯಸ್ಸಿನ ಸುದರ್ಶನ ಹಾಗೂ 46 ವರ್ಷ ವಯಸ್ಸಿನ ಹೇಮಲತಾ ದಂಪತಿಗೆ ಕಳೆದ ವಾರ ಕೊವಿಡ್ ದೃಢಪಟ್ಟಿತ್ತು. ಅವರು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಸುದರ್ಶನ್ ಮೃತಪಟ್ಟಿದ್ದು, ಸಂಜೆಯ ವೇಳೆಗೆ ಪತ್ನಿ ಹೇಮಲತಾ ಕೂಡ ಮೃತಪಟ್ಟಿದ್ದಾರೆ.
ಇನ್ನೂ ಸಾವಿನಲ್ಲಿಯೂ ಒಂದಾದ ದಂಪತಿಯನ್ನು ಅಕ್ಕಪಕ್ಕವೇ ಮಾಡಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಇನ್ನೂ ಇವರ ಪುತ್ರ ಹೇಮಂತ್ ತಂದೆ ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ.




























