ಶಾಕಿಂಗ್ ನ್ಯೂಸ್: ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ! - Mahanayaka
1:10 AM Wednesday 11 - December 2024

ಶಾಕಿಂಗ್ ನ್ಯೂಸ್: ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ!

rabies
05/10/2021

ಮಂಡ್ಯ:  ಹುಚ್ಚುನಾಯಿಯೊಂದು ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿ ನಡೆಸಿದ ಆತಂಕಕಾರಿ ಘಟನೆ ನಡೆದಿದ್ದು, ಘಟನೆಯಿಂದ ಮಂಡ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಹುಚ್ಚು ನಾಯಿಯ ಕಡಿತದಿಂದಾಗಿ 40 ಜನರು  ಗಾಯಗೊಂಡಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮಾಕಳ್ಳಿ, ಪುರ ಗೇಟ್, ಕುಂದನಹಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿ ಗ್ರಾಮಸ್ಥರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ ಎಂದು ಹೇಳಲಾಗಿದ್ದು, ಗ್ರಾಮದಲ್ಲಿ ಓಡಾಡಿದ ಹುಚ್ಚು ನಾಯಿ, ಕೂಲಿ ಕಾರ್ಮಿಕರು, ಕಬ್ಬು ಕಟಾವು ಮಾಡುವವರು ಮೊದಲಾದವರಿಗೆ ಕಚ್ಚಿ ಗಾಯಗೊಳಿಸಿದೆ ಎಂದು ಹೇಳಲಾಗಿದೆ.

ಹುಚ್ಚು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ 40 ಜನರಲ್ಲಿ ಹಲವರನ್ನು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರನ್ನು ಮೈಸೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಹುಚ್ಚು ನಾಯಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳನ್ನು ನಿಯಂತ್ರಿಸಲು ಸ್ಥಳೀಯ ಆಡಳಿತಗಳು ವಿಫಲವಾಗುತ್ತಿರುವ ನಡುವೆಯೇ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, 40 ಮಂದಿ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ಮಾತ್ರವಲ್ಲದೇ ಪರಿಹಾರವನ್ನು ನೀಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಮಹಿಳೆಗೆ ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ | “ಪಾಳೆಗಾರಿಕೆ ಮನಸ್ಥಿತಿಯ ಕ್ರಿಮಿಗಳಿಗೆ  ಕಠಿಣ ಶಿಕ್ಷೆಯಾಗಲಿ”

ಪೊಲೀಸರ ಬದಲು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ  | ಅನೈತಿಕ ಪೊಲೀಸ್ ಗಿರಿ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ

75 ಯುವತಿಯರನ್ನು ಮದುವೆಯಾಗಿ, 200 ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡಿದ ಪಾಪಿ ಅರೆಸ್ಟ್!

ರೈಲಿನಲ್ಲಿ ಅಪ್ರಾಪ್ತೆಗೆ ಮೇಲೆ ಲೈಂಗಿಕ ಕಿರುಕುಳ ನಡೆಸಿದವನಿಗೆ 5 ವರ್ಷ ಜೈಲು ಶಿಕ್ಷೆ

ಆರ್ಯನ್ ಖಾನ್ ಜೊತೆಗೆ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮಾಡೆಲ್ ಯಾರು ಗೊತ್ತಾ?

ಉತ್ತರ ಪ್ರದೇಶದಲ್ಲಿ ರಾಮ ರಾಜ್ಯವಿಲ್ಲ, ಕೊಲೆಗಡುಕ ಸರ್ಕಾರವಿದೆ: ಮಮತಾ ಬ್ಯಾನರ್ಜಿ ಕಿಡಿ

ಕಾಂಗ್ರೆಸ್ ಗೆ ಭವಿಷ್ಯವಿಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದು ಚೂರಾಗುತ್ತಿದೆ | ಸಚಿವ ಅಶ್ವಥ್ ನಾರಾಯಣ್

ಈ ಬಾರಿಯೂ ಸಿಗಲಿಲ್ಲ ಬಿಜೆಪಿ ಟಿಕೆಟ್: ಮಹತ್ವದ ತೀರ್ಮಾನ ಕೈಗೊಂಡ ಪ್ರಮೋದ್ ಮುತಾಲಿಕ್

ಇತ್ತೀಚಿನ ಸುದ್ದಿ