ಹಾಸಿಗೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು - Mahanayaka

ಹಾಸಿಗೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

krishna river
28/06/2021

ಬೆಳಗಾವಿ: ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿದ್ದ ಸಂದರ್ಭ ಒಂದೇ ಕುಟುಂಬದ ನಾಲ್ವರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿ  ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.


Provided by

ನೀರಲ್ಲಿ ಓರ್ವ ಕಾಲು ಜಾರಿ ಬಿದ್ದಿದ್ದು, ಈ ವೇಳೆ ಒಬ್ಬರನ್ನೊಬ್ಬರು ರಕ್ಷಿಸಲು ಪ್ರಯತ್ನಿಸಿ ನಾಲ್ವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಪರಶುರಾಮ್ ಬನಸೊಡೆ, ಶಂಕರ್ ಬನಸೊಡೆ, ಧರೆಪ್ಪ ಬನಸೊಡೆ ಮೃತ ಸಹೋದರರಾಗಿದ್ದಾರೆ.

ನದಿಯಲ್ಲಿ ಕೊಚ್ಚಿ ಹೋದವರನ್ನು ಪತ್ತೆ ಮಾಡುವ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಸಿಬ್ಬಂದಿ, ಪತ್ತೆಗೆ ಮುಂದಾಗಿದೆ. ನಾಲ್ವರು ಸಹೋದರರನ್ನು ಏಕಕಾಲದಲ್ಲಿ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.


Provided by

ಇತ್ತೀಚಿನ ಸುದ್ದಿ