ಕೊರೊನಾ ಬರುತ್ತದೆ ಎನ್ನುವ ಭೀತಿಯಿಂದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ! - Mahanayaka
4:08 PM Thursday 12 - December 2024

ಕೊರೊನಾ ಬರುತ್ತದೆ ಎನ್ನುವ ಭೀತಿಯಿಂದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!

covid 19
23/06/2021

ಹೈದ್ರಾಬಾದ್: ಕೊರೊನಾ ಭೀತಿಯಿಂದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದ್ದು, ವೃದ್ಧರು ಕೂಡ ಕೊರೊನಾವನ್ನು ಜಯಿಸುತ್ತಿರುವ ಸಂದರ್ಭದಲ್ಲಿ ಇಂತಹದ್ದೊಂದು ನಿರ್ಧಾರವನ್ನು ಕುಟುಂಬಸ್ಥರು ತಳೆದಿರುವುದಕ್ಕೆ ಜನರು ಮರುಕ ವ್ಯಕ್ತಪಡಿಸಿದ್ದಾರೆ.

42 ವರ್ಷ ವಯಸ್ಸಿನ ಪ್ರತಾಪ್ ಹಾಗೂ ಅವರ ಪತ್ನಿ 36 ವರ್ಷ ವಯಸ್ಸಿನ ಹೇಮಲತಾ, 17 ವರ್ಷದ ಪುತ್ರ ಜಯಂತ್, 14 ವರ್ಷ ವಯಸ್ಸಿನ ಪುತ್ರಿ ರಿಶಿತಾ ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ.

ಬೆಳಗ್ಗೆಯಾದರೂ ಮನೆಯಿಂದ ಯಾರೂ ಹೊರಗೆ ಬರದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸಂದರ್ಭದಲ್ಲಿ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಇಡೀ ಕುಟುಂಬವೇ ಒತ್ತಡಕ್ಕೀಡಾಗಿತ್ತು ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ. ನಮಗೆ ಕೂಡ ಕೊರೊನಾ ಬರಬಹುದು ಎನ್ನುವ ಭೀತಿಯಿಂದ ಇಡೀ ಕುಟುಂಬ ವಿಷ ಸೇವಿಸಿ ಸಾವಿಗೆ ಶರಣಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ