ಪಿಕ್ನಿಕ್ ಗೆ ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕುಟುಂಬಸ್ಥರ ಕಣ್ಣ ಮುಂದೆಯೇ ನೀರುಪಾಲಾದರು! - Mahanayaka

ಪಿಕ್ನಿಕ್ ಗೆ ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕುಟುಂಬಸ್ಥರ ಕಣ್ಣ ಮುಂದೆಯೇ ನೀರುಪಾಲಾದರು!

drown water
08/08/2021

ಬೆಂಗಳೂರು:  ಪಿಕ್ನಿಕ್ ಗೆ ಹೋಗಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ವೆಲಿಗಲ್ಲು ಪ್ರಾಜೆಕ್ಟ್ ಪ್ರದೇಶಕ್ಕೆ ಪಿಕ್ನಿಕ್ ಹೋಗಿದ್ದು, ಹಿನ್ನೀರಿನಲ್ಲಿ ಇಡೀ ಕುಟುಂಬ ಆಟವಾಡುತ್ತಿದ್ದ ಸಂದರ್ಭದಲ್ಲಿ  ಕುಟುಂಬಸ್ಥರ ಕಣ್ಮುಂದೆಯೇ ನಾಲ್ವರು ನೀರು ಪಾಲಾಗಿದ್ದಾರೆ.

ತಾಜ್ ಮುಹಮ್ಮದ್, ಮುಹಮ್ಮದ್, ಉಸ್ಮಾನ್ ಖಾನಂ, ಮೊಹಮ್ಮದ್ ಹಫೀಜ್ ಮೃತಪಟ್ಟವರು ಎಂದು ತಿಳಿದು ಬಂದಿದ್ದು, ಮೃತಪಟ್ಟವರೆಲ್ಲರೂ ಬೆಂಗಳೂರಿನ ಚಿನ್ನಪ್ಪ ಗಾರ್ಡನ್ ನಿವಾಸಿಗಳಾಗಿದ್ದು, ಇವರ ಕುಟುಂಬದ ಒಟ್ಟು 12 ಮಂದಿ ಆಂಧ್ರಪ್ರದೇಶದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.

ಮಧ್ಯಾಹ್ನದ ಬಳಿಕ ಚಿತ್ತೂರಿನ ಸಂಬಂಧಿಕರ ಮನೆಯಿಂದ ಮಕ್ಕಳೊಂದಿಗೆ ಡ್ಯಾಮ್ ವೀಕ್ಷಿಸಲು  ವೆಲಿಗಲ್ಲಿಗೆ ತೆರಳಿದ್ದರು. ಸಂಹೆ 4:30ರ ಸುಮಾರಿಗೆ ಹಿನ್ನೀರಿನಲ್ಲಿ ಆಟವಾಡುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಲಕ್ಕಿರೆಡ್ಡಿ ಪಾಳ್ಯ ಪೊಲೀಸರು ಭೇಟಿ ನೀಡಿ ಸತತ 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇನ್ನೂ ಕೆಲವು ಕ್ಷಣ ಮುಂದೆ ತಮ್ಮೊಂದಿಗೆ ಸಂತೋಷವಾಗಿದ್ದ ಕುಟುಂಬದ ನಾಲ್ವರು ಶವವಾಗಿ ತಮ್ಮ ಕಣ್ಣ ಮುಂದೆ ಮಲಗಿರುವುದರನ್ನು ಕಂಡು, ತೀವ್ರ ದುಃಖಕ್ಕೊಳಗಾದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಂತದ ಕ್ಷಣದಲ್ಲಿ ಪ್ರಕೃತಿಯ ಆಟವೇ ಬೇರೆಯೇ ಇತ್ತು. ಇದೀಗ ಇಡೀ ಕುಟುಂಬ ಶೋಕದಲ್ಲಿದೆ.

ಇತ್ತೀಚಿನ ಸುದ್ದಿ