ಒಂದೇ ತಿಂಗಳಲ್ಲಿ ಮುರಿದು ಬಿದ್ದ ಕಾಲುವೆ ತಡೆಗೋಡೆ: ಇಂಜಿನಿಯರ್, ಗುತ್ತಿಗೆದಾರರನ್ನು ತರಾಟೆಗೆತ್ತಿಕೊಂಡ ಎನ್.ಮಹೇಶ್ - Mahanayaka
8:20 PM Wednesday 11 - December 2024

ಒಂದೇ ತಿಂಗಳಲ್ಲಿ ಮುರಿದು ಬಿದ್ದ ಕಾಲುವೆ ತಡೆಗೋಡೆ: ಇಂಜಿನಿಯರ್, ಗುತ್ತಿಗೆದಾರರನ್ನು ತರಾಟೆಗೆತ್ತಿಕೊಂಡ ಎನ್.ಮಹೇಶ್

yalanduru n mahesh
28/08/2022

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ತಾಲೂಕಿನ ಕಟ್ಟೆ ಗಣಿಗನೂರು ಗ್ರಾಮದ ನೂತನವಾಗಿ ನಿರ್ಮಾಣಗೊಂಡ ಕಾಲುವೆ ಒಂದೇ ತಿಂಗಳಲ್ಲಿ ಮುರಿದು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

ಯಳಂದೂರು ತಾಲೂಕಿನ ಕಟ್ಟೆ ಗಣಿಗನೂರು ಗ್ರಾಮದ ರೈತರ ಜಮೀನಿಗೆ ನೀರು ತುಂಬಿಕೊಳ್ಳುತ್ತಿದ್ದ ಕಾರಣ ಅದನ್ನು ತಡೆಯಲು 50 ಲಕ್ಷ ರೂ. ವೆಚ್ಚದಲ್ಲಿ ಕಾಲುವೆ ನಿರ್ಮಾಣಕ್ಕೆ ನೀರಾವರಿ ಇಲಾಖೆ ಕಾಮಗಾರಿಯನ್ನು ಮಾಡಿತ್ತು. ಕಾಮಗಾರಿ ಮುಗಿದು ಕೇವಲ ಒಂದು ತಿಂಗಳಾಗಿದ್ದು, ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಮಾಡಿರುವುದರಿಂದ ಕಾಲುವೆಯ ಒಂದು ಭಾಗ ಕುಸಿದು ಬಿದ್ದಿದೆ.

ಸ್ಥಳಕ್ಕೆ ಭೇಟಿ ನೀಡಿ ಎನ್.ಮಹೇಶ್, ಇಂಜಿನಿಯರ್ ನ್ನು ಪ್ರಶ್ನಿಸಿದ್ದು, ಈ ವೇಳೆ ಟೆಕ್ನಿಕಲ್ ಇಶ್ಯನಿಂದಾಗಿ ಘಟನೆ ನಡೆದಿದೆ ಎಂದು ಅವರು ವಿವರಿಸಿದ್ದಾರೆ. ಈ ವೇಳೆ, “ನೀವು ಟೆಕ್ನಿಕಲ್ ಇಶ್ಯೂ ಅಂತ ಹೇಳಬಹುದು, ಆದ್ರೆ ಜನ ಏನು ಮಾತನಾಡಿ ಕೊಳ್ತಾರೆ ಅಂತ ಗೊತ್ತಿದೆಯಾ? ಎಂದು ಪ್ರಶ್ನಿಸಿದ ಅವರು, ಇದೊಂದು ಕಳಪೆ ಕಾಮಗಾರಿ ಅಂತ ಜನ ಹೇಳ್ತಿದ್ದಾರೆ  ಎಂದು ಎಚ್ಚರಿಸಿದರು. ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೂತನವಾಗಿ ನಿರ್ಮಿಸಲು ಇದೇ ವೇಳೆ ಸೂಚನೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ