ಒಂದೆಡೆ ಪ್ರತಿಭಟನೆ ಮತ್ತೊಂದೆಡೆ ರಾಹುಲ್ ಗಾಂಧಿ ವಿಚಾರಣೆ! - Mahanayaka
10:00 AM Thursday 12 - December 2024

ಒಂದೆಡೆ ಪ್ರತಿಭಟನೆ ಮತ್ತೊಂದೆಡೆ ರಾಹುಲ್ ಗಾಂಧಿ ವಿಚಾರಣೆ!

rahul gandhi
13/06/2022

ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿಚಾರಣೆ ಪೂರ್ಣಗೊಂಡಿದೆ. ವಿಚಾರಣೆ ಕೇವಲ 15 ನಿಮಿಷಗಳ ಕಾಲ ನಡೆಸಿ ಅಗತ್ಯಬಿದ್ದರೆ ಕರೆ ಮಾಡುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.

ಒಂದೆಡೆ ರಾಹುಲ್ ವಿಚಾರಣೆ ನಡೆಸುತ್ತಿದ್ದಾರೆ, ಇನ್ನೊಂದೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿತ್ತು. ದೇಶದ ರಾಜಧಾನಿ ಇನ್ನೂ ಅಲ್ಲೋಲಕಲ್ಲೋಲದಲ್ಲಿದ್ದು,  ಇಡಿ ಕಚೇರಿ ಎದುರು ಉದ್ವಿಗ್ನ ಸ್ಥಿತಿ ಮುಂದುವರಿದಿದೆ.  ಹಿರಿಯ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ.  ಎಐಸಿಸಿ ಪ್ರಧಾನ ಕಚೇರಿ ಎದುರು ಕೇಂದ್ರ ಸೇನೆ ನಿಯೋಜಿಸಲಾಗಿದೆ. ಈ ವೇಳೆ  ಇಡಿ ಕಚೇರಿ ಎದುರು ರಾಹುಲ್ ಗಾಂಧಿ ಪರ ವಕೀಲರನ್ನು ಪೊಲೀಸರು ವಶಕ್ಕೆ ತಡೆದಿದ್ದರು.

ಇಂದು ಬೆಳಗ್ಗೆಯಿಂದ ದೆಹಲಿ ಪೊಲೀಸರು ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೆ ಇದನ್ನು ಕಡೆಗಣಿಸಿ  ಕಾಂಗ್ರೆಸ್‌ ನ ಹಿರಿಯ ನಾಯಕರು ಕೂಡ ಇಡಿ ಕಚೇರಿಗೆ ಭೇಟಿ ನೀಡಿದ್ದರು.  ಈ ವೇಳೆ ದೆಹಲಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಸಾಮೂಹಿಕವಾಗಿ ವಶಕ್ಕೆ ಪಡೆದುಕೊಂಡರು.  ಎಐಸಿಸಿ ಕೇಂದ್ರ ಕಚೇರಿ ಎದುರು ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು.

ಕೆ.ಸಿ.ವೇಣುಗೋಪಾಲ್, ಪಿ.ಚಿದಂಬರಂ ಸೇರಿದಂತೆ ಮುಖಂಡರು ಇಡಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆದರೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದ ಕಾರಣ ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಭಾರೀ ವಾಗ್ವಾದ ನಡೆಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಸ್, ಟೆಂಪೋ ಟ್ರಾವೆಲ್ ಮೇಲೆ ಉರುಳಿ ಬಿದ್ದ ಬೃಹತ್ ಮರ!

ಇಡಿ ಕಚೇರಿಗೆ ರಾಹುಲ್ ಗಾಂಧಿ ಅಧಿಕಾರಿಗಳಿಂದ ಹಾಜರು

ಜಿಮ್ ನಲ್ಲಿ ವರ್ಕೌಟ್ ವೇಳೆ ಕುಸಿದು ಬಿದ್ದು ಯುವಕ ಸಾವು!

ಲೈಂಗಿಕ ದೌರ್ಜನ್ಯ ವಿರೋಧಿಸಿದ ಮಹಿಳೆ ಪೇಪರ್ ಕಟರ್ ನಿಂದ ಹಲ್ಲೆ:  ಮಹಿಳೆ ಮುಖಕ್ಕೆ 118 ಹೊಲಿಗೆ!

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸಂಚು?: ದೂರು ದಾಖಲು

ಇತ್ತೀಚಿನ ಸುದ್ದಿ