ಒಂದೆಲಗ ಸೇವನೆಯಿಂದ ಪಡೆಯಿರಿ ಈ ಅದ್ಭುತ ಪ್ರಯೋಜನಗಳು - Mahanayaka
6:03 PM Wednesday 11 - December 2024

ಒಂದೆಲಗ ಸೇವನೆಯಿಂದ ಪಡೆಯಿರಿ ಈ ಅದ್ಭುತ ಪ್ರಯೋಜನಗಳು

ondelaga
28/05/2022

ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಒಂದೆಲಗ ಔಷಧಿಯ ಗುಣವಿರುವ ಸಸ್ಯವಾಗಿದೆ. ನೆಲದಲ್ಲಿ ನೀರಿನಂಶ ಇರುವ ಪ್ರದೇಶದಲ್ಲಿ ಒಂದೆಲಗ ಹೆಚ್ಚಾಗಿ ಇರುತ್ತದೆ. ಕರಾವಳಿಯ ಭಾಗಕ್ಕೆ ಬಂದರೆ, ಅಡಿಕೆ ತೋಟಗಳಲ್ಲಿ, ಗದ್ದೆಗಳಲ್ಲಿ ಇವುಗಳು ಸಾಕಷ್ಟು ಪ್ರಮಾಣಗಳಲ್ಲಿ ದೊರೆಯುತ್ತವೆ.

ಕೆಮ್ಮು, ಉಸಿರಾಟದ ತೊಂದರೆ ಇರುವವರು ಒಂದೆಲವನ್ನು ಬಳಸುವುದು ಬಹಳ ಉತ್ತಮವಾಗಿದೆ. ಒಂದೆಲಗದ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸ ಬೇಕು. ಒಂದೆಲಗ ನಮ್ಮ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇದರ ಸೇವನೆಯಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ ಎಂದು ಜನರು ನಂಬುತ್ತಾರೆ.

ಪ್ರತಿನಿತ್ಯ ಬೆಳೆಯುವ ಮಕ್ಕಳಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳಲ್ಲಿ ಸ್ಮರಣ ಶಕ್ತಿ ಹೆಚ್ಚಾಗಲು ಇದು ಸಹಕಾರಿಯಾಗಿದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುತ್ತದೆ.

ಮಲಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಬಹುದು. ಮಾತ್ರವಲ್ಲದೇ ಒಂದೆಲಗ ರೋಗ ನಿವಾರಕವು ಹೌದು. ಒಂದೆಲಗ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಮಧುಮೇಹಿಗಳಿಗೆ ದಿನನಿತ್ಯ ನೀಡಿದರೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸಬಹುದು.

ಒಂದೆಲಗ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಎರಡು ಗಂಟೆಗಳ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಾವಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು!

ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಠಿಣ ಶಿಕ್ಷೆ ಕೊಡಿಸುತ್ತೇವೆ: ಸಚಿವ ಮುರುಗೇಶ್ ನಿರಾಣಿ

ಬಡ ಎಸ್ಸಿ-ಎಸ್ ಟಿ ಕುಟುಂಬಗಳಿಗೆ ಉಚಿತ ವಿದ್ಯುತ್: ಬಿಜೆಪಿ ಸರ್ಕಾರ ಆದೇಶ

ದಲಿತ ಯುವಕನನ್ನು ಸರಪಳಿಯಿಂದ ಬಂಧಿಸಿ ಅಮಾನುಷ ಹಲ್ಲೆ

ಸ್ಟೇಡಿಯಂನಲ್ಲಿ ನಾಯಿ ಜೊತೆ ವಾಕಿಂಗ್ ಮಾಡಿದ್ದ ಐಎಎಸ್ ಅಧಿಕಾರಿ ದಂಪತಿ ವರ್ಗಾವಣೆ

ಇತ್ತೀಚಿನ ಸುದ್ದಿ