ಒಂದೊಂದೇ ರೂಪಾಯಿ ಕೂಡಿಟ್ಟು ಬೈಕ್ ಖರೀದಿಸಿದ ಯುವಕ - Mahanayaka

ಒಂದೊಂದೇ ರೂಪಾಯಿ ಕೂಡಿಟ್ಟು ಬೈಕ್ ಖರೀದಿಸಿದ ಯುವಕ

bike
29/03/2022

ಸೇಲಂ: ಯುವಕನೋರ್ವ ಒಂದೊಂದೇ ರೂಪಾಯಿಯನ್ನು ಕೂಡಿಟ್ಟು ಬೈಕ್ ಖರೀದಿಸಿದ ಘಟನೆ ಸೇಲಂನಲ್ಲಿ ನಡೆದಿದೆ.

ಸೇಲಂನ ಭೂಪತಿ ಎಂಬ 29 ವರ್ಷದ ಯುವಕ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಕನಸಿನ ಬಜಾಜ್ ಡೊಮಿನರ್ 400ಸಿಸಿ ಬೈಕ್ ನ್ನು 1 ರೂ. ನಾಣ್ಯಗಳನ್ನು ಕೂಡಿಟ್ಟು ಕೊನೆಗೂ ತನ್ನ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.

ಈ ಬೈಕ್ ಬೆಲೆ 2,60,000 ರೂಪಾಯಿಗಳು. ಈ ಬೈಕ್ ನ್ನು ಖರೀದಿಸಲು ಬೇಕಾಗಿರುವ ಮೊತ್ತವನ್ನು ಹೊಂದಿಸಲು ಭೂಪತಿ ಮೂರು ವರ್ಷಗಳಿಂದ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದನು.

ಭೂಪತಿಯವರು ತಾನು ಸಂಗ್ರಹಿಸಿದ ನಾಣ್ಯಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಶೋರೂಮ್ ಗೆ ಬೈಕ್ ಖರೀದಿಸಲು ತೆರಳಿದ್ದರು. ಶೋರೂಂ ಸಿಬ್ಬಂದಿಗೆ ನಾಣ್ಯಗಳನ್ನು ಎಣಿಸುವುದು ತಲೆನೋವಿನ ಕೆಲಸ ಆಗಿತ್ತು ಆದರೂ. ಶೋರೂಂ ಮ್ಯಾನೇಜರ್ ಭೂಪತಿಗೆ ನಿರಾಸೆ ಮಾಡದೆ ತಂದಿದ್ದ ಭಾರವಾದ ಗೋಣಿಚೀಲದಲ್ಲಿ ನಾಣ್ಯಗಳನ್ನು ಎಣಿಸಿದ್ದು,ನಾಣ್ಯಗಳನ್ನು ಎಣಿಸಲು 10 ಗಂಟೆ ಬೇಕಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಸ್,  ದ್ವಿಚಕ್ರ ವಾಹನದ ನಡುವೆ ಅಪಘಾತ: ಹೆಡ್ ಕಾನ್ಸ್‌ಟೇಬಲ್ ಗೆ ಗಂಭೀರ ಗಾಯ

ರಂಜಾನ್ ಆರಂಭವಾಗುತ್ತಿದ್ದಂತೆಯೇ ಭಾರೀ ಬೆಲೆಗೆ ಮಾರಾಟವಾದ ಒಂಟೆ

ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಹತ್ಯೆಗೈದ ಮಗಳು

ಆನ್‍ಲೈನ್ ಗೇಮ್‌ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

ಬಂಧನ ಭೀತಿ ಎದುರಿಸುತ್ತಿರುವ ಸಚಿವ ಸೋಮಣ್ಣ: ಮಾ.30ರಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

 

ಇತ್ತೀಚಿನ ಸುದ್ದಿ