ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ | ಕಾಂಗ್ರೆಸ್ ಗಂಭೀರ ಆರೋಪ
ಬೆಂಗಳೂರು: ಕೊರೊನಾ ಕಾಲ ಘಟ್ಟವನ್ನು ಬಿಜೆಪಿಗರು ಹಣ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗ ಹಣ ಬಿದ್ದಂತೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ’ ಕರೋನಾ ಕಾಲಘಟ್ಟವನ್ನು ಉಭಯ ಸರ್ಕಾರಗಳು ಭರಪೂರ ಲೂಟಿಗೆ ಬಳಸಿಕೊಳ್ಳುತ್ತಿವೆ. ಈ ಹೆಣದ ಮೇಲಿನ ಹಣಕ್ಕಾಗಿಯೇ ಬಿಜೆಪಿಯಲ್ಲಿ ಕಿತ್ತಾಟ ಶುರುವಾಗಿರುವುದು ಪಿಎಂ ಕೇರ್ಸ್‌ನಿಂದ ಹಿಡಿದು ಔಷಧ ಕಾಳಸಂತೆ, ಲಸಿಕೆ ಬ್ಲಾಕಿಂಗ್ ವರೆಗೂ ಚಾಚಿವೆ ಇವರ ಬಾಚಿ ತಿನ್ನುವ ಕೈಗಳು ಎಂದು ಕಾಂಗ್ರೆಸ್ ಹೇಳಿದೆ.
ಸರ್ಕಾರದಿಂದ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅದನ್ನು ₹900 ರಿಂದ ₹1,200ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆಡಳಿತ ಪಕ್ಷದವರು ಶಾಮೀಲಾಗಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು. ಪ್ರಕರಣದ ಬಗ್ಗೆ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
4 ಕೋಟಿ ಲಸಿಕೆಗಳು ನಾಪತ್ತೆಯಾದ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರುಗಳು ಸರ್ಕಾರದ ಉಚಿತ ಹಂಚಿಕೆಯ ಬಡವರ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಿಕೊಂಡು ಕಮಿಷನ್ ಪಡೆಯುತ್ತಿರುವ ‘ಮಹಾ ಹಗರಣ’ ಬೆಳಕಿಗೆ ಬಂದಿದೆ. ಅವರಿಬ್ಬರನ್ನೂ ಚುನಾಯಿತ ಸ್ಥಾನಗಳಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.