ಒಂದು ದಿನ ಮುಂಚಿತವಾಗಿಯೇ ವಿಧಾನಮಂಡಲ ಅಧಿವೇಶನಕ್ಕೆ ತೆರೆ: ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಅಧಿವೇಶನ ರದ್ದು?
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 19 ರಿಂದ ಆರಂಭವಾಗಿದ್ದ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ನಿಗದಿಗಿಂತ ಒಂದು ದಿನ ಮುಂಚಿತವಾಗಿಯೇ ಕೊನೆಗೊಂಡಿದೆ.
ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಸಂಜೆ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಬೆಳಗಾವಿಯಲ್ಲಿ ಡಿಸೆಂಬರ್ 19 ರಂದು ಪ್ರಾರಂಭವಾಗಿದ್ದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 30 ರಂದು ಕೊನೆಗೊಳ್ಳಬೇಕಿತ್ತು. ಆದರೆ ಒಂದು ದಿನಕ್ಕಿಂತ ಮೊದಲೇ ಅಧಿವೇಶನವನ್ನು ಕೊನೆಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಬಹುಮುಖ್ಯ ಚರ್ಚೆಗಳನ್ನೂ ನಿರ್ಲಕ್ಷ್ಯಿಸಿ ಸದನಕ್ಕೆ ತೆರೆ ಎಳೆಯಲಾಗಿದೆ. ಬೆಳಗಾವಿ ಅಧಿವೇಶನ ಆರಂಭದ ದಿನದಿಂದಲೂ ಸದಸ್ಯರು ತೀವ್ರ ನಿರಾಸಕ್ತಿ ವಹಿಸಿರುವುದು ಕಂಡು ಬಂದಿದೆ. ಸಚಿವರು ವಿಧಾನ ಸಭೆಗೆ ಹಾಜರಾಗದೇ ನಿರ್ಲಕ್ಷ್ಯವಹಿಸಿದ್ದರು. ಇದೀಗ ಒಂದು ದಿನಕ್ಕಿಂತ ಮುಂಚಿತವಾಗಿಯೇ ಸದನಕ್ಕೆ ತೆರೆ ಎಳೆಯಲಾಗಿದೆ.
ಅಮಿತ್ ಶಾ ಅವರ ಭೇಟಿಗಾಗಿ ಬಿಜೆಪಿ ಸರ್ಕಾರ ವಿಧಾನಮಂಡಲದ ಅಧಿವೇಶನವನ್ನು ಒಂದು ದಿನ ಮುಂಚಿತವಾಗಿ ಮೊಟಕುಗೊಳಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka