ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ್‌ - Mahanayaka

ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ್‌

prabhakar bhat1
20/03/2022

ಮಂಗಳೂರು: ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಕರಾವಳಿಯ ಕಾರ್ನಿಕ ದೈವ ಕೊರಗಜ್ಜ ಕ್ಷೇತ್ರದ ಕಡೆ ಭಕ್ತರ ನಡಿಗೆ ಎಂಬ ಹೆಸರಿನಲ್ಲಿ ನಡೆದ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆಯಲ್ಲಿ ಅವರು ಈ ಬಗ್ಗೆ ಮಾತನಾಡಿದರು.

ಇದಕ್ಕೆ ಕಾರಣ ನೀಡಿದ ಅವರು, ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು ಎಂಬ ಬಗ್ಗೆ ವಿವರಿಸಿದರು. ಮೊದಲು ಬ್ರಿಟಿಷರ ಧ್ಬಜ ಇತ್ತು, ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು. ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್ ನಲ್ಲಿ ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು. ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ. ಹೀಗೆಯೇ ಮುಂದುವರೆದರೆ ಹಿಂದೂ ಸಮಾಜ ಒಟ್ಟಾಗುತ್ತೆ ಎಂದರು.

ಇವತ್ತು ಕಾಶ್ಮೀರ ಫೈಲ್ಸ್‌ನಲ್ಲಿ ನೀವು ನೋಡೋದು ಸಣ್ಣ ತುಂಡಷ್ಟೇ. ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಷಂಡ ಕಾಂಗ್ರೆಸ್ ಒಪ್ಪಿಕೊಂಡಿತು. ಇವತ್ತು‌ ಅದೇ ರೀತಿ ಹಿಜಾಬ್ ಬಂದಿದೆ, ಕಿತಾಬ್ ಬೇಡ ಎಂದು ಹೇಳುತ್ತಿದ್ದಾರೆ. ಎಲ್ಲಾ ವ್ಯವಸ್ಥೆ ಕೊಟ್ಟರೂ ನಾವು ಪ್ರತ್ಯೇಕವಾದಿ ಅನ್ನೋ ಮನೋಭಾವ ಇದೆ. ಇದು ಈ ದೇಶವನ್ನು ಮುಂದೆ ತುಂಡು ಮಾಡುವ ಪ್ರಯತ್ನ ಎಂದು ವಾಗ್ದಾಳಿ ನಡೆಸಿದರು.




ಇದೇ ವೇಳೆ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಸಾವಿರಾರು ಭಕ್ತರು ಸುಮಾರು 15 ಕಿ.ಮೀ. ನಡೆದುಕೊಂಡು ಬಂದು ಆದಿಕ್ಷೇತ್ರ ಕುತ್ತಾರು ತಲುಪಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ