ಒಂದು ಇಂಚು ನೆಲವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - Mahanayaka
1:13 AM Wednesday 11 - December 2024

ಒಂದು ಇಂಚು ನೆಲವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

basavaraj bommai
21/12/2021

ಬೆಳಗಾವಿ: ಕರ್ನಾಟಕ ರಾಜ್ಯದ ಗಡಿಭಾಗಗಳ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಅದರ ಬೇಡಿಕೆಗೆ ಬಲವಾದ ಸಂದೇಶ ಕಳುಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕರ್ನಾಟಕ ಒಂದು ಇಂಚು ನೆಲವನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದೆ.

ಈ ಬಗ್ಗೆ ಸದನದಲ್ಲಿ ಕಲಾಪದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನ ಸೌಧ ಕರ್ನಾಟಕದ ಮತ್ತೊಂದು ಶಕ್ತಿ ಕೇಂದ್ರವಾಗಿದ್ದು ಸೂರ್ಯ-ಚಂದ್ರ ಇರುವವರೆಗೆ ಕರ್ನಾಟಕದ ಭಾಗವಾಗಿಯೇ ಇರುತ್ತದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ಗಡಿಭಾಗದಲ್ಲಿ ಎರಡೂ ರಾಜ್ಯಗಳ ಮಧ್ಯೆ ಗಲಭೆ, ಉದ್ವಿಗ್ನ ಪರಿಸ್ಥಿತಿ ನಿರ್ಮಿಸುವುದಕ್ಕೆ ಕಿಡಿಕಾರಿದ ಮುಖ್ಯಮಂತ್ರಿ ಬೊಮ್ಮಾಯಿ. ಮಹಾರಾಷ್ಟ್ರದ ಜಾಟ್ ಪ್ರದೇಶದಲ್ಲಿ 40 ಗ್ರಾಮ ಪಂಚಾಯತ್‌ಗಳು ಕರ್ನಾಟಕಕ್ಕೆ ಸೇರಲು ಈಗಾಗಲೇ ತಮ್ಮ ಆಶಯ ವ್ಯಕ್ತಪಡಿಸಿ ನಿರ್ಣಯ ಹೊರಡಿಸಿವೆ. ಮಹಾರಾಷ್ಟ್ರ ಸರ್ಕಾರ ಅವರಿಗೆ ನೀರು ಸಹ ಕೊಡಲು ವಿಫಲವಾಗಿದೆ ಎಂದರು.

ಕರ್ನಾಟಕಕ್ಕೆ ಬರಲು ಇಚ್ಛಿಸುವ ಗಡಿಭಾಗದ ಜನರನ್ನು ಸ್ವಾಗತಿಸಲು ಸರ್ಕಾರ ಸದಾ ಸಿದ್ದವಿದೆ. ಗಡಿ ವಿವಾದಕ್ಕೆ ಸುದೀರ್ಘವಾದ ದೃಢ ನಿಲುವು ತಳೆಯಲು ಇದು ಸರಿಯಾದ ಸೂಕ್ತ ಸಮಯ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಚಿವರ ಮಕ್ಕಳೇ ಕ್ರಿಶ್ಚಿಯನ್ ಸ್ಕೂಲ್ ನಲ್ಲಿ ಕಲಿತಿದ್ದಾರೆ, ಅಲ್ಲಿ ಮತಾಂತರಕ್ಕೆ ಬಲವಂತ ಮಾಡಿದ್ರಾ? | ಡಿ.ಕೆ.ಶಿವಕುಮಾರ್ ಪ್ರಶ್ನೆ

ಸರ್ಕಾರಿ ಕಚೇರಿಯಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ: ಆರ್​ ಟಿಐ ಕಾರ್ಯಕರ್ತನ ಬಂಧನ

ಕಿರಣಿ ಅಂಗಡಿಗೆ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳ ಬಂಧನ

ಯೂಟ್ಯೂಬ್ ನೋಡಿಕೊಂಡು ಪತ್ನಿಗೆ ಡೆಲಿವರಿ ಮಾಡಲು ಯತ್ನಿಸಿದ ಪತಿ: ಮಗು ಸಾವು, ಮಹಿಳೆಯ ಸ್ಥಿತಿ ಚಿಂತಾಜನಕ

ಕನ್ನಡ ಬಾವುಟ ಸುಟ್ಟು, ಬಸವಣ್ಣನ ಚಿತ್ರ ಅಪವಿತ್ರಗೊಳಿಸಿದ ಮೂವರು ಆರೋಪಿಗಳ ಬಂಧನ

ಮೊದಲ ಬಲಿ ಪಡೆದುಕೊಂಡ ಒಮಿಕ್ರಾನ್: 50 ವರ್ಷದ ವ್ಯಕ್ತಿ ಸಾವು

ಇತ್ತೀಚಿನ ಸುದ್ದಿ