ಒಂದು ಲಾಟರಿ ಟಿಕೆಟ್ ನಲ್ಲಿ ಕೋಟ್ಯಾಧೀಶನಾದ ಕೇರಳದ ಯುವಕ
04/02/2021
ದುಬೈ: ಕೇರಳದ ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಕಿ ಡ್ರಾದಲ್ಲಿ ಭರ್ಜರಿ ಬಹುಮಾನ ಸಿಕ್ಕಿದ್ದು, ಒಂದೇ ಟಿಕೆಟ್ ನಲ್ಲಿ ಅವರು 7 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ.
ಅಬುದಾಬಿಯಲ್ಲಿ ನೆಲೆಸಿರುವ ಕೇರಳದ ಎರ್ನಾಕುಲಂ ಮೂಲದ ಸೂರಜ್ ಅನೀದ್ (35) ಈ ಅದೃಷ್ಟವಂತ ಯುವಕ. ಜನವರಿ 20ರಂದು ಅವರು ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡಿದ್ದರು.
ಸೂರಜ್ ಅವರು ಖರೀದಿಸಿದ್ದ ಟಿಕೆಟ್ ಸಂಖ್ಯೆ 4645ಕ್ಕೆ ಬಹುಮಾನ ಒಲಿದಿದೆ. ತಮಗೆ ಲಾಟರಿಯಲ್ಲಿ 7 ಕೋ.ರೂ. ಬಂದಿರುವ ವಿಚಾರವನ್ನು ಸೂರಜ್ ಅವರೇ ಫೇಸ್ ಬುಕ್ ಲೈವ್ ನಲ್ಲಿ ಬಂದು ತಿಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ದುಬೈನ ಯುಎಇಯಲ್ಲಿರುವ ಸೂರಜ್ ಬ್ಯಾಂಕ್ ವೊಂದರ ಕಸ್ಟಮರ್ ಕೇರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಪತ್ನಿ ಮತ್ತು ಮಗಳೊಂದಿಗೆ ವಾಸವಿದ್ದಾರೆ.