12:45 AM Wednesday 12 - March 2025

ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ರಾಷ್ಟ್ರಕ್ಕೆ ಒಬ್ಬನೇ ನಾಯಕ ಮಾಡುವ ಹುನ್ನಾರ | ಸಿದ್ದರಾಮಯ್ಯ

05/03/2021

ಬೆಂಗಳೂರು: ಚುನಾವಣೆ ವ್ಯವಸ್ಥೆಗೆ ಸುಧಾರಣೆ ತರುವ ಹೆಸರಿನಲ್ಲಿ ಒಂದು ರಾಷ್ಟ್ರ ಒಬ್ಬ ನಾಯಕ ಮತ್ತು ಒಂದು ಪಕ್ಷ ಎಂದು ಮಾಡಲು ಬಿಜೆಪಿ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆರೆಸ್ಸೆಸ್ ಅಜೆಂಡಾ ಸದನದಲ್ಲಿ ಹೇರಲು ಬಿಡುವುದಿಲ್ಲ. ಚುನಾವಣೆಗೆ ಸುಧಾರಣೆ ತಂದಿದ್ದರೆ ಚರ್ಚೆ ಮಾಡಬಹುದಿತ್ತು. ದೇಶದಲ್ಲಿ ನಡೆಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದವು. ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿರುವುದು ಕೂಡ ಕೇಂದ್ರ ಸರ್ಕಾರ. ಹೀಗಿರುವಾಗ ವಿಧಾನಮಂಡಲ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ವಿಚಾರ ಚರ್ಚಿಸುವುದರಿಂದ ಏನು ಪ್ರಯೋಜನ ೆಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಒಂದು ದೇಶ, ಒಂದು ಚುನಾವಣೆಯು ಒಂದು ದೇಶಕ್ಕೆ ಒಬ್ಬನೇ ನಾಯಕ, ಒಂದೇ ಪಕ್ಷ ಮಾಡುವ ಹುನ್ನಾರ. ಇದು ಆರೆಸ್ಸೆಸ್ ನ ಅಜೆಂಡಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

whatsapp

ಇತ್ತೀಚಿನ ಸುದ್ದಿ

Exit mobile version