ಒಂದು ರಾತ್ರಿಯಲ್ಲಿ ಕೋಟ್ಯಾದೀಶ್ವರನಾದ ಮೀನುಗಾರ
ಥಾಯ್: ಮೀನುಗಾರನೊಬ್ಬ ನರಿಸ್ ಸುವನ್ಸಾಂಗ್ ರಾತ್ರೋ ರಾತ್ರಿ ಕೋಟ್ಯಾದಿಪತಿಯಾಗಿದ್ದು, 60 ವರ್ಷದ ನರಿಸ್ ಬಾಲ್ಯದಿಂದಲೂ ಸಮುದ್ರದಲ್ಲೇ ತಮ್ಮ ಜೀವನ ಕಳೆದಿದ್ದಾರೆ. ಆದರೆ ಅವರು ನಂಬಿದ ವೃತ್ತಿ ಕೊನೆಗೂ ಅವರ ಕೈ ಬಿಡಲಿಲ್ಲ.
ಬೆಳಗ್ಗೆ ನರಿಸ್ ಎಂದಿನಂತೆಯೇ ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಅಲೆಗಳ ಕೆಳಗೆ ಏನೋ ವಸ್ತು ಕಂಡು ಬಂದಿದೆ. ಆರಂಭದಲ್ಲಿ ಇದು ಏನು ಎನ್ನುವುದನ್ನು ತಿಳಿಯಲು ಆ ವ್ಯಕ್ತಿಗೆ ಸಾಧ್ಯವಾಗಲಿಲ್ಲ. ಆ ಬಳಿಕ ಇದು ಸಮುದ್ರದ ಅಪರೂಪದ ನಿಧಿ, ಅಥವಾ ತಿಮಿಂಗಿಲ ವಾಂತಿ ಎಂದು ಕರೆಯಲ್ಪಡುವ ವಸ್ತುವಾಗಿದೆ ಎಂದು ನರಿಸ್ ಗೆ ತಿಳಿದಿದೆ.
ತಕ್ಷಣ ನರಿಸ್ ಅಂಬರ್ಗ್ರಿಸ್ ಎಂದು ಕರೆಯಲ್ಪಡುವ ಈ ಅಪರೂಪದ ಸಮುದ್ರ ನಿಧಿಯನ್ನು ತಜ್ಞರನ್ನು ಕರೆಸಿ ಪರಿಶೀಲಿಸಿದರು. ಈ ವೇಳೆ ಅವರು, ಈ ನಿಧಿಗೆ ಬರೋಬ್ಬರಿ 23 ಕೋಟಿ ರೂಪಾಯಿ ಬೆಲೆ ಇದೆ ಎಂದು ಹೇಳಿದಾಗ ಆತ ತಲೆ ತಿರುಗಿ ಬೀಳುವುದೊಂದೇ ಬಾಕಿ ಇತ್ತು.
ಈ ಅಂಬರ್ಗಿಸ್ ಎಂದು ಕರೆಯಲ್ಪಡುವ ವಸ್ತುತಿಮಿಂಗಿಲದ ಹೊಟ್ಟೆಯಲ್ಲಿ ಉತ್ಪತ್ತಿಯಾಗುತ್ತದೆ. ತಿಮಿಂಗಿಲ ಸೇವಿಸುವ ತೀಕ್ಷ್ಣವಾದ ವಸ್ತುಗಳನ್ನು ತಡೆದು ಅದರ ಹೊಟ್ಟೆಯನ್ನು ಈ ಅಂಬರ್ಗಿಸ್ ಕಾಪಾಡುತ್ತದೆ. ಸಾಮಾನ್ಯವಾಗಿ ಇದು 100 ಕೆ.ಜಿ. ತೂಕವಿರುತ್ತದೆ. ಇದರ ಮೌಲ್ಯ ಬರೋಬ್ಬರಿ 23 ಕೋಟಿ ರೂಪಾಯಿಗಳಾಗಿವೆ. ಇದು ಅತ್ಯಂತ ದುಬಾರಿಯಾಗಿದ್ದು, ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರ ದುಪ್ಪಟ್ಟು ಬೆಲೆಯ ಕಾರಣ ಇದನ್ನು ಸಮುದ್ರ ನಿಧಿ ಎಂದು ಕರೆಯಲಾಗುತ್ತದೆ.