ಒಂದು ಸಮಾಜದ ಮೆಚ್ಚುಗೆ ಗಳಿಸಲು ಗೋಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ | ನಳಿನ್ ಕುಮಾರ್ ಕಟೀಲ್ - Mahanayaka

ಒಂದು ಸಮಾಜದ ಮೆಚ್ಚುಗೆ ಗಳಿಸಲು ಗೋಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ | ನಳಿನ್ ಕುಮಾರ್ ಕಟೀಲ್

11/12/2020

ಮಂಗಳೂರು:  ಕಾಂಗ್ರೆಸ್, ಒಂದು ಸಮಾಜದ ಮೆಚ್ಚುಗೆ ಗಳಿಸಲು ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಹೇಳಿದ್ದಾರೆ.

ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆ ಜಾರಿಗೊಳಿಸಿದ ಸಂಭ್ರಮದಲ್ಲಿ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಎದುರು ಗೋ ಪೂಜೆ ನೆರವೇರಿಸಿದ ಅವರು, ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು.

 ಓಟ್ ಬ್ಯಾಂಕ್’ನ ತುಷ್ಟೀಕರಣ ನೀತಿ ಸಲುವಾಗಿ ಕಾಂಗ್ರೆಸ್ ಈಗ ಮಸೂದೆ ಬಗ್ಗೆ ಚರ್ಚೆ ಬೇಕು ಎನ್ನುತ್ತಿದೆ. ಕಾಂಗ್ರೆಸ್ ಗೆ ಕೃಷಿ ಮತ್ತು ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಆದ್ದರಿಂದ ಗೋಹತ್ಯೆ ತಡೆ ಮಸೂದೆಯನ್ನು ವಿರೋಧಿಸುತ್ತದೆ ಎಂದು ಅವರು ಟೀಕಿಸಿದರು.

ಗೋವುಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿರುವ ರೈತರ ಜೀವನದಲ್ಲಿ ಕಾಂಗ್ರೆಸ್ ಆಟವಾಡುತ್ತಿದೆ. ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಈ ಮಸೂದೆ ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ