ಶಾಕಿಂಗ್ ನ್ಯೂಸ್: ಒಂದು ತಿಂಗಳೊಳಗೆ ಯಡಿಯೂರಪ್ಪ, ಈಶ್ವರಪ್ಪನವರ ದಾಖಲೆಯೂ ಬಿಡುಗಡೆಯಾಗುತ್ತದೆ ಎಂದ ಶಾಸಕ! - Mahanayaka
1:10 PM Thursday 12 - December 2024

ಶಾಕಿಂಗ್ ನ್ಯೂಸ್: ಒಂದು ತಿಂಗಳೊಳಗೆ ಯಡಿಯೂರಪ್ಪ, ಈಶ್ವರಪ್ಪನವರ ದಾಖಲೆಯೂ ಬಿಡುಗಡೆಯಾಗುತ್ತದೆ ಎಂದ ಶಾಸಕ!

06/03/2021

ಬೆಂಗಳೂರು:  ಒಂದು ತಿಂಗಳೊಳಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪನವರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದು,  ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಎಲ್ಲಿದ್ದರು? ಎಲ್ಲಿಂದ ಎಲ್ಲಿಗೆ ಬಂದರು? ಎಂಬ ಬಗ್ಗೆ ಸಂಪೂರ್ಣ ಮಾಹಿತಿ, ದಾಖಲೆ ನನ್ನ ಬಳಿ ಇದೆ ಎಂದು ಅವರು ಹೇಳಿದ್ದಾರೆ.

ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಇನ್ನೊಂದು ತಿಂಗಳಿನಲ್ಲಿ ಯಡಿಯೂರಪ್ಪ, ಈಶ್ವರಪ್ಪನವರ ದಾಖಲೆಯನ್ನೂ ಬಿಡುಗಡೆ ಮಾಡುತ್ತೇನೆ. ಈ ಬಿಜೆಪಿ ಸರ್ಕಾರ ಎಕ್ಕುಟ್ಟಿ ಹೋಗುತ್ತದೆ. ಜನರ ಸೇವೆ ಮಾಡಿ ಎಂದು ಕಳುಹಿಸಿದರೆ, ಇಲ್ಲಿ ಬಂದು ಮಜಾ ಮಾಡುತ್ತಿದ್ದಾರೆ. ಇದರಿಂದಾಗಿ ಯಾವ ರಾಜಕಾರಣಿಗಳೂ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪ ಮತ್ತು ರಾಘವೇಂದ್ರ ಹಾಗೂ ಈಶ್ವರಪ್ಪ ಲುಚ್ಚಾ ರಾಜಕಾರಣ ಮಾಡುತ್ತಿದ್ದಾರೆ.  ಯಡಿಯೂರಪ್ಪ ಸರ್ಕಾರಕ್ಕೆ ಇನ್ನೂ ಕೇವಲ 2 ತಿಂಗಳು ಮಾತ್ರವೇ ಆಯುಷ್ಯ. ಮುಂದೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುತ್ತದೆ ಎಂದು  ಅವರು ಹೇಳಿದರು.

ಇತ್ತೀಚಿನ ಸುದ್ದಿ