ಒಂದು ವರ್ಷದ ಮಗುವನ್ನು ಚರ್ಚ್ ನಲ್ಲಿ ಮಲಗಿಸಿ ಪರಾರಿಯಾದ ಪೋಷಕರು!
ಮಂಡ್ಯ: ಮಂಡ್ಯದ ಚರ್ಚ್ ಆವರಣದಲ್ಲಿ ಒಂದು ವರ್ಷದ ಮಗುವನ್ನು ಮಲಗಿಸಿ ಪೋಷಕರು ನಾಪತ್ತೆಯಾಗಿರುವ ಘಟನೆ ನಿನ್ನೆ (ಗುರುವಾರ) ಬೆಳಗ್ಗೆ ನಡೆದಿದೆ.
ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿ ಇರುವ ಸೆಂಟ್ ಜಾನ್ಸ್ ಶಾಲೆಯ ಆವರಣದಲ್ಲಿರುವ ಚರ್ಚ್ ನಲ್ಲಿ ಈ ಘಟನೆ ನಡೆದಿದೆ.
ಚರ್ಚ್ ಗೆ ಬಂದ ಇಬ್ಬರು ವ್ಯಕ್ತಿಗಳು ಚರ್ಚ್ನ ಆವರಣದಲ್ಲಿ ಒಂದು ವರ್ಷದ ಗಂಡು ಮಗುವನ್ನು ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಫಾದರ್ ಮಗುವನ್ನು ಪಡೆದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಅನಾರೋಗ್ಯದಿಂದ ಬಳಲುತ್ತಿರುವ ಮಗುವನ್ನು ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹವಾಮಾನ ವೈಪರೀತ್ಯದಿಂದ ಜನರು ನಿದ್ರೆಯನ್ನು ಕಳೆದುಕೊಳ್ಳಲಿದ್ದಾರೆ!
ಜೀವನದಲ್ಲಿ ಜಿಗುಪ್ಸೆ: ದುಡುಕಿನ ನಿರ್ಧಾರ ತೆಗೆದುಕೊಂಡ ದಂಪತಿ!
ಬ್ಲಡ್ ಬ್ಯಾಂಕ್ ನಿಂದ ರಕ್ತ ಪಡೆದ ನಾಲ್ಕು ಮಕ್ಕಳಿಗೆ ಎಚ್ ಐವಿ: ಒಂದು ಮಗು ಸಾವು
ಪರಮಾಣು ಬಾಂಬ್ ನಿಂದ ಮಾತ್ರ ಹೊಸ ಸ್ಕಾರ್ಪಿಯೋವನ್ನು ನಾಶ ಮಾಡಲು ಸಾಧ್ಯ: ಆನಂದ್ ಮಹೀಂದ್ರ
ಇಂದಿರಾ ಕ್ಯಾಂಟೀನ್ ನ್ನು ಇಸ್ಕಾನ್ ಸಂಸ್ಥೆಗೆ ವಹಿಸಿದ ರಾಜ್ಯ ಸರ್ಕಾರ!