ಕೆಂಪು ಕೋಟೆಯ ಗುಮ್ಮಟದ ಮೇಲೆಯೂ ಹತ್ತಿ ತಮ್ಮ ಧ್ವಜ ಹಾರಿಸಿದ ರೈತರು
ದೆಹಲಿ: ಕೆಂಪುಕೋಟೆಯನ್ನು ಆಕ್ರಮಿಸಿಕೊಂಡಿರುವ ರೈತರು ಕೆಂಪುಕೋಟೆಯ ಧ್ವಜಸ್ಥಂಬದಲ್ಲಿ ತಮ್ಮ ಧ್ವಜವನ್ನು ಹಾರಿಸಿದ ಬಳಿಕ ಕೆಂಪು ಕೋಟೆಗೆ ಹತ್ತಲು ಆರಂಭಿಸಿದ್ದಾರೆ. ಪೊಲೀಸರ ತಡೆಯನ್ನು ಮೀರಿ ರೈತರು ಕೆಂಪು ಕೋಟೆಯನ್ನು ಹತ್ತಿದ್ದಾರೆ.
ಕೆಂಪುಕೋಟೆಯ ಗುಮ್ಮಟದ ಮೇಲೆ ಹತ್ತಿದ ರೈತರು ಧ್ವಜದ ಸಮೀಪದಲ್ಲಿರುವ ಎರಡು ಗುಮ್ಮಟಗಳ ಮೇಲೆ ರೈತರ ಬಾವುಟಗಳನ್ನು ಹಾರಿಸಿದ್ದಾರೆ. ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹದ್ದೊಂದು ಘಟನೆ ನಡೆದಿದೆ.
ರೈತರ ಎರಡು ತಂಡಗಳ ಪೈಕಿ ಒಂದು ತಂಡ ಪಾರ್ಲಿಮೆಂಟ್ ಕಡೆಗೆ ತೆರಳಿದ್ದು, ಇನ್ನೊಂದು ತಂಡ ಕೆಂಪುಕೋಟೆಗೆ ಆಗಮಿಸಿತ್ತು. ಪಾರ್ಲಿಮೆಂಟ್ ಗೂ ನುಗ್ಗಲು ರೈತರು ವಿಫಲ ಯತ್ನ ನಡೆಸಿದ್ದಾರೆ. ಆದರೆ, ಕೆಂಪು ಕೋಟೆಯಲ್ಲಿ ರೈತರು ಕೋಟೆಯನ್ನು ಆಕ್ರಮಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಕೇಂದ್ರ ಸರ್ಕಾರದ ಜೊತೆಗೆ ಹಲವು ಸುತ್ತಿನ ಮಾತುಕತೆಯ ಬಳಿಕವೂ ವಿವಾದಿತ ಕೃಷಿ ಕಾನೂನನ್ನು ಸರ್ಕಾರ ಹಿಂಪಡೆದಿಲ್ಲ. ಸರ್ಕಾರದ ಈ ಉದಾಸೀನತೆಯಿಂದ ರೈತರ ತಾಳ್ಮೆಯ ಕಟ್ಟೆ ಹೊಡೆದಿದ್ದು, ದೆಹಲಿಯಲ್ಲಿ ಇಂದು ಸರ್ಕಾರದ ಜೊತೆಗೆ ರೈತರು ಮುಖಾಮುಖಿಯಾಗಿದ್ದಾರೆ.