ಆನ್ ಲೈನ್ ಕ್ಲಾಸ್ ಗೆ ಶುಲ್ಕವನ್ನು ಕಡಿಮೆ ಮಾಡಬೇಕು ಶಿಕ್ಷಣ ಸಂಸ್ಥೆಗಳಿಗೆ  ಸುಪ್ರೀಂ  ಸೂಚನೆ - Mahanayaka
9:59 PM Thursday 14 - November 2024

ಆನ್ ಲೈನ್ ಕ್ಲಾಸ್ ಗೆ ಶುಲ್ಕವನ್ನು ಕಡಿಮೆ ಮಾಡಬೇಕು ಶಿಕ್ಷಣ ಸಂಸ್ಥೆಗಳಿಗೆ  ಸುಪ್ರೀಂ  ಸೂಚನೆ

supreme court
04/05/2021

ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಆನ್​ ಲೈನ್​ ತರಗತಿಗಳನ್ನ ಹೊರತುಪಡಿಸಿ ಕ್ಯಾಂಪಸ್​ ನ ಇನ್ಯಾವ ಸೇವೆಗಳೂ ಬಳಕೆಯಾಗದ ಕಾರಣ ವಿದ್ಯಾರ್ಥಿಗಳ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ  ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಕೊರೊನಾ ಕಾರಣದಿಂದಾಗಿ ದೇಶದ ಜನತೆ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟವನ್ನೂ ಶಾಲಾ ಆಡಳಿತ ಮಂಡಳಿ ಗಮನದಲ್ಲಿಡಬೇಕು. ಶಾಲೆಯಲ್ಲಿ ನಡೆಸಲಾಗುವ ಚಟುವಟಿಕೆ ಹಾಗೂ ಶಾಲೆಗಳಲ್ಲಿ ಇರುವ ಸೌಲಭ್ಯಕ್ಕೆ ಸಂಬಂಧಿಸಿ ಶುಲ್ಕವನ್ನ ವಸೂಲಿ ಮಾಡಬೇಕು ಎಂಬ ಕಾನೂನಿಲ್ಲ. ಕೊರೊನಾದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಈ ಯಾವ ಸೌಲಭ್ಯಗಳನ್ನೂ ನೀಡಲಾಗಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಲಾಭದ ಹಿಂದೆ ಹೋಗುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಎ.ಎಂ.ಖಾನ್​ವಿಲ್ಕರ್​​ ಹಾಗೂ ದಿನೇಶ್​​ ಮಹೇಶ್ವರಿ ಅವರಿದ್ದ ಪೀಠ ಹೇಳಿದೆ.

2020-21ನೇ ಸಾಲಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದರಿಂದಾಗಿ ಶಾಲೆಗಳು ಸಂಪೂರ್ಣ ಬಂದ್ ಆಗಿತ್ತು. ವಿದ್ಯಾರ್ಥಿಗಳು ಶಾಲೆಯ ಯಾವುದೇ ವಸ್ತುಗಳನ್ನು ಬಳಕೆ ಮಾಡಿಲ್ಲ.  ವಿದ್ಯಾರ್ಥಿಗಳಿಗೆ ಶಾಲೆಗಳಿಂದ ನೀಡಲಾಗದ ಸೌಲಭ್ಯಗಳಿಗೂ ಶುಲ್ಕ ಕೇಳಿದರೆ ಅದು ಲಾಭದಾಯ ಎಣಿಸಿಕೊಳ್ಳುತ್ತದೆ ಎಂದು ಕೋರ್ಟ್ ಹೇಳಿದೆ.

ಇತ್ತೀಚಿನ ಸುದ್ದಿ