ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಬಾಲಕ ಆತ್ಮಹತ್ಯೆಗೆ ಶರಣು
ಭೋಪಾಲ್: ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಚತ್ತರ್ ಪುರ್ ನಲ್ಲಿ ನಡೆದಿದ್ದು,ಆತನ ಡೆತ್ ನೋಟ್ ನಿಂದಾಗಿ ಘಟನೆ ಬಯಲಿಗೆ ಬಂದಿದೆ.
ಲ್ಯಾಬೋರೇಟರಿಯೊಂದರ ಮಾಲಿಕನ ಪುತ್ರ 13 ವರ್ಷ ವಯಸ್ಸಿನ ಬಾಲಕ 6ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಕಾರಣ ಆತ್ಮಹತ್ಯೆಗೆ ಶರಣಾಗಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾನೆ ಎಂದು ಡಿಎಸ್ ಪಿ ಶಶಾಂಕ್ ಜೈನ್ ತಿಳಿಸಿದ್ದಾರೆ.
ಹಣ ಕಳೆದುಕೊಂಡಿರುವುದಕ್ಕೆ ನಾನು ಪ್ರಾಣ ಕಳೆದುಕೊಳ್ಳುತ್ತೇನೆ. ನನ್ನ ತಪ್ಪಿಗೆ ಕ್ಷಮೆ ಇರಲಿ ಎಂದು ಬಾಲಕ ತನ್ನ ತಾಯಿಗೆ ಬರೆದ ಪತ್ರದಲ್ಲಿ ತಿಳಿದಿದ್ದಾನೆ. ಫ್ರೀ ಫೈಯರ್ ಆನ್ ಲೈನ್ ಗೇಮ್ ನಲ್ಲಿ ಆಟ ಆಡಲು ಯುಪಿಐ ಅಕೌಂಟ್ ನಲ್ಲಿ 40 ಸಾವಿರ ಡ್ರಾ ಮಾಡಿ ಆ ಹಣ ಸೋತಿದ್ದೇನೆ ಎಂದು ಆತ ಬರೆದುಕೊಂಡಿದ್ದಾನೆ.
ಯುಪಿಐ ಅಕೌಂಟ್‍ನಿಂದ 40 ಸಾವಿರ ಡ್ರಾ ಮಾಡಿದ ಮೆಸೇಜ್ ಆತನ ತಾಯಿಯ ಮೊಬೈಲ್‍ಗೆ ಬಂದ ಕೂಡಲೇ ಆಕೆ ತನ್ನ ಮಗನಿಗೆ ದೂರವಾಣಿ ಕರೆ ಮಾಡಿ ಬೈದಿದ್ದಾರೆ. ಈ ಘಟನೆಯ ನಂತರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಜೈನ್ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಬಿಜೆಪಿಗೆ ಬಂದ 17 ಶಾಸಕರಿಗೆ ಬಿಗ್ ಶಾಕ್ ನೀಡಿದ ಮಾಜಿ ಸಿಎಂ ಯಡಿಯೂರಪ್ಪ!
ವಿಚ್ಛೇದನದ ಬಳಿಕ ಜೊತೆಯಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಬರ್ಬರ ಹತ್ಯೆ!
ಎರಡು ಮದುವೆಯಾದ ತಂದೆ, ತನ್ನ ಮಗನನ್ನೇ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ!
ಕೋಳಿ ಆಹಾರ ತಯಾರಿಕಾ ಘಟಕದಲ್ಲಿ ಭಾರೀ ಸ್ಫೋಟ | ಕಾರ್ಯಾಚರಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗೂ ಗಂಭೀರ ಗಾಯ