ಕಿರುಕುಳ ಸಹಿಸದೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೂ ಬಿಡದ ಆನ್ ಲೈನ್ ಲೋನ್ ಆ್ಯಪ್ ವಿಷ ಜಾಲ - Mahanayaka

ಕಿರುಕುಳ ಸಹಿಸದೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೂ ಬಿಡದ ಆನ್ ಲೈನ್ ಲೋನ್ ಆ್ಯಪ್ ವಿಷ ಜಾಲ

online loan app
21/12/2022

ಚಿಕ್ಕಮಗಳೂರು: ಆನ್ ಲೈನ್ ಲೋನ್ ಆ್ಯಪ್ ಗೆ ಬಲಿಯಾದವರು ಒಬ್ಬಿಬ್ಬರಲ್ಲ, ಆದರೂ ಜನ ಮತ್ತೆ ಮತ್ತೆ ಆನ್ ಲೈನ್ ಆ್ಯಪ್ ಗಳಿಂದ ಸಾಲ ಪಡೆಯುವುದನ್ನು ನಿಲ್ಲಿಸುತ್ತಿಲ್ಲ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಮಹಿಳೆಯೊಬ್ಬರು ಆನ್ ಲೈನ್ ಲೋನ್ ಆ್ಯಪ್ ನವರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದು, ಸತ್ತರೂ ಬೆಂಬಿಡದೇ ಆ್ಯಪ್ ನವರು ಹಿಂಬಾಲಿಸಿದ್ದಾರೆ.


Provided by

ಹೌದು..!  ಮಹಿಳೆ ಮೃತಪಟ್ಟ ಬಳಿಕ ಅವರ ಕುಟುಂಬಸ್ಥರನ್ನು ಹುಡುಕಿಕೊಂಡು ಬಂದಿರುವ ಲೋನ್ ಆ್ಯಪ್ ನವರು ಲೋನ್ ಪಾವತಿ ಮಾಡುವಂತೆ ಕುಟುಂಬಸ್ಥರನ್ನು ಕಾಡುತ್ತಿದ್ದು, ಇದೀಗ ಸಾರ್ವಜನಿಕರು ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದೆ ಬಣಕಲ್ ನ ಇಂದಿರಾನಗರದ ಮಹಿಳೆ ಆನ್ ಲೈನ್ ಆ್ಯಪ್ ನ ಕಿರುಕುಳದಿಂದ ನೊಂದು ಸಾವಿಗೆ ಶರಣಾಗಿದ್ದರು.  ಆದರೆ ಮೃತರ ಮನೆಗೆ ಬುಧವಾರ ಆಗಮಿಸಿದ ಆನ್ ಲೈನ್ ಲೋನ್ ಆ್ಯಪ್  ಕಂಪೆನಿಯ ಸಿಬ್ಬಂದಿ ಸಾಲ ವಸೂಲಾತಿಗೆ ಯತ್ನಿಸಿದ್ದಾರೆ.


Provided by

ಮಹಿಳೆ ಸಾಕಷ್ಟು ಹಣಪಾವತಿಸಿದ್ದರೂ, ಆ್ಯಪ್ ನವರ ಕಿರುಕುಳ ನಿಂತಿರಲಿಲ್ಲ, ಇದೀಗ ಮಹಿಳೆ ಸಾವಿಗೆ ಶರಣಾಗಿದ್ದರೂ, ಮಹಿಳೆಯನ್ನು ಲೋನ್ ಆ್ಯಪ್ ನವರು ಬೆಂಬಿಡದೇ ಹಿಂಬಾಲಿಸುತ್ತಲೇ ಇದ್ದಾರೆ. ಆನ್ ಲೈನ್ ಲೋನ್ ಆ್ಯಪ್ ಯಾರೂ ಪಡೆಯ ಬೇಡಿ, ಇವರ ಕಿರುಕುಳ ಅಷ್ಟಿಷ್ಟಲ್ಲ. ಸುಲಭವಾಗಿ ಲೋನ್ ಸಿಗುತ್ತದೆ ಎಂದು ಬಲೆಗೆ ಬೀಳಬೇಡಿ, ಇದೊಂದು ಮಾಯಾಜಾಲ, ಕರುಣೆ ಇಲ್ಲದ ವಿಷ ಜಾಲ ಎಂದು ಸಾರ್ವಜನಿಕರು ಲೋನ್ ಆ್ಯಪ್ ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ