ಆನ್ ಲೈನ್ ಮೀಟಿಂಗ್ ನಲ್ಲಿದ್ದಾಗ ಮತ್ತೊಂದು ಯಡವಟ್ಟು | ಈ ಬಾರಿ ಮಹಿಳೆಯ ಸರದಿ
ಕೊವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದೆ. ಈ ನಡುವೆ ವರ್ಕ್ ಫ್ರಂ ಹೋಮ್ ನ ಸಂದರ್ಭದಲ್ಲಿ ಆನ್ ಲೈನ್ ಕರೆಗಳ ವೇಳೆಯಲ್ಲಿ ಆಗುತ್ತಿರುವ ಯಡವಟ್ಟುಗಳು ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗುತ್ತಲೇ ಇರುತ್ತದೆ.
ಇತ್ತೀಚೆಗೆ ಉದ್ಯೋಗಿಯೋರ್ವ ಆನ್ ಲೈನ್ ಮೀಟಿಂಗ್ ನಲ್ಲಿದ್ದ ಸಂದರ್ಭ ಪತ್ನಿ ಬಂದು ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್ನೊಂದು ಘಟನೆಯಲ್ಲಿ ತಂದೆ ಆನ್ ಲೈನ್ ನಲ್ಲಿರುವ ಸಂದರ್ಭದಲ್ಲಿ ಮಗ ಕೊಠಡಿಗೆ ಆಗಮಿಸುತ್ತಾನೆ. ಈ ವೇಳೆ ಮಗನನ್ನು ಕೊಠಡಿಯಿಂದ ಆ ಕಡೆಗೆ ಬಿಡಲು ತಂದೆ ಎದ್ದು ನಿಂತಿದ್ದು, ಈ ವೇಳೆ ತಂದೆ ಕೇವಲ ಬರ್ಮುಡದಲ್ಲಿದ್ದು, ಮೇಲೆ ಮಾತ್ರ ಕೋಟ್ ಧರಿಸಿರುವುದು ಆನ್ ಲೈನ್ ನಲ್ಲಿರುವ ಎಲ್ಲರಿಗೂ ಕಂಡು ಬಂದಿದ್ದು, ಎಲ್ಲರೂ ಬಿದ್ದು ಬಿದ್ದು ನಗಲು ಆರಂಭಿಸಿದ್ದಾರೆ.
ಇಂತಹದ್ದೇ ಒಂದು ಘಟನೆ ಇದೀಗ ನಡೆದಿದ್ದು, ಮಹಿಳೆಯೊಬ್ಬರು ಕಂಪೆನಿಯ ಸಿಇಒ ಜೊತೆಗೆ ಆನ್ ಲೈನ್ ಕರೆಯಲ್ಲಿದ್ದ ಸಂದರ್ಭದಲ್ಲಿ ಯಡವಟ್ಟೊಂದು ನಡೆದಿದ್ದು, ಕ್ಷಣ ಕಾಲ ವಿಡಿಯೋದಲ್ಲಿದ್ದವರೆಲ್ಲರೂ ಶಾಕ್ ಗೊಳಗಾಗಿದ್ದಾರೆ.
ಚಾರ್ಲೋಟ್ ಎಂಬ ಮಹಿಳೆ ಈ ವಿಡಿಯೋವನ್ನು ಖುದ್ದಾಗಿ ತಾವೇ ಪೋಸ್ಟ್ ಮಾಡಿದ್ದಾರೆ. ಸಿಇಒ ಜೊತೆಗೆ ಸಂಭಾಷಣೆಯಲ್ಲಿದ್ದ ವೇಳೆ ಕುರ್ಚಿಯಿಂದ ಆಯತಪ್ಪಿ ಮಹಿಳೆ ಕೆಳಗೆ ಬಿದ್ದಿದ್ದಾರೆ. ಕ್ಷಣ ಕಾಲ ಮಹಿಳೆ ಎಲ್ಲಿದ್ದಾರೆ ಎಂದು ವಿಡಿಯೋದಲ್ಲಿದ್ದ ಇತರರು ಹುಡುಕುತ್ತಿರುವುದು ಕಂಡು ಬಂದಿದೆ. ಆ ಬಳಿಕ ಮಹಿಳೆ ಮೆಲ್ಲಗೆ ಎದ್ದು ಕ್ಯಾಮರದ ಬಳಿ ಬಂದಿದ್ದಾರೆ.
ಈ ವಿಡಿಯೋವನ್ನು ಮಹಿಳೆಯೇ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿ, ಸಿಇಒ ಜೊತೆಗೆ ಸಂಭಾಷಣೆಯಲ್ಲಿದ್ದ ವೇಳೆ ನಾನು ಕುರ್ಚಿಯಿಂದ ಬಿದ್ದ ವಿಡಿಯೋ ನೋಡಿ ಎಂಜಾಯ್ ಮಾಡಿ ಎಂದು ಅವರೇ ಕ್ಯಾಪ್ಷನ್ ನೀಡಿದ್ದಾರೆ. ಅವರು ಬಿದ್ದ ವಿಡಿಯೋವನ್ನು ನೋಡಿ ನಕ್ಕಿರುವುದಕ್ಕಿಂತಲೂ ಹೆಚ್ಚು, ಅವರು ನೀಡಿರುವ ಕ್ಯಾಪ್ಷನ್ ನೋಡಿ ನಕ್ಕವರೇ ಹೆಚ್ಚು.
View this post on Instagram