ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಚಿಕನ್ ಖಾದ್ಯದಲ್ಲಿ ಹುಳು!

02/02/2021

ಮಂಗಳೂರು:  ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದ ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಹರಿದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ನಗರದ ಮಾಲ್ ವೊಂದರಲ್ಲಿನ  ಚಿಕ್ ಕಿಂಗ್ ಇಟ್ಸ್ ಮೈ ಚಾಯಿಸ್ ಸಂಸ್ಥೆಯೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.

ಮಹಿಳೆಯೊಬ್ಬರು ಆರ್ಡರ್ ಮಾಡಿದ್ದ ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಪತ್ತೆಯಾಗಿತ್ತು. ಅಧಿಕಾರಿಗಳು ಸಂಸ್ಥೆಗೆ ದಾಳಿ ನಡೆಸಿದಾಗ ಅವಧಿ ಮುಗಿದ ಚಿಕನ್ ಐಟಮ್ಸ್, ಬನ್ ಮೊದಲಾದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಲೇಡಿ ಹಿಲ್ ನಿವಾಸಿ ಸಿಮ್ರನ್ ಎಂಬವರು  “ಚಿಕ್ ಕಿಂಗ್” ಸಂಸ್ಥೆಯಿಂದ ಶನಿವಾರ ಸಂಜೆ ಚಿಕನ್ ಖಾದ್ಯ ಸಹಿತವಾದ ಬರ್ಗರ್ ಪಾರ್ಸೆಲ್ ಮಾಡಿಸಿಕೊಂಡಿದ್ದರು.  8 ಗಂಟೆಯ ಸುಮಾರಿಗೆ ಪಾರ್ಸೆಲ್  ಮನೆಗೆ ಬಂದಿದೆ.  ಕುಟುಂಬದ ಸದಸ್ಯರು ಆಹಾರ ಸೇವಿಸುತ್ತಿದ್ದ ಸಂದರ್ಭದಲ್ಲಿ  ಖಾದ್ಯದಲ್ಲಿ ಹುಳು ಕಾಣಿಸಿಕೊಂಡಿತ್ತು.

ಸಲ್ಮಾ ಅವರು ಈ ಬಗ್ಗೆ ಊರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಗ್ರಾಹಕ ನ್ಯಾಯಾಲಯಕ್ಕೂ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.  ಇನ್ನೂ ಸಂಸ್ಥೆಗೆ ದಾಳಿ ನಡೆದ ಸಂದರ್ಭದಲ್ಲಿ ಅವಧಿ ಮುಗಿದ ಖಾದ್ಯ ಸೇರಿದಂತೆ  ವಿವಿಧ ಪದಾರ್ಥಗಳನ್ನು  ಡಬ್ಬದಲ್ಲಿ ತುಂಬಿಸಿ ಸೀಲ್ ಮಾಡಿ ಅಧಿಕಾರಿಗಳು ಸಾಗಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ದಾಳಿ ನಡೆಸಿದ ಬಗ್ಗೆಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version