ಹೆತ್ತ ತಾಯಿಯನ್ನೇ ಕೊಂದು ಹೂತು ಹಾಕಿದ ಏಕೈಕ ಮಗಳು!

ಮಂಡ್ಯ: ಮಹಿಳೆಯೊಬ್ಬರು ತನ್ನ ಏಕೈಕ ಮಗಳಿಂದಲೇ ಹತ್ಯೆಗೀಡಾದ ಘಟನೆ ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಗಳು ಹಾಗೂ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದು ಸುಮಾರು 13 ತಿಂಗಳ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೈಸೂರು ಜಿಲ್ಲೆಯ ಹಾರೋಹಳ್ಳಿ ನಿವಾಸಿ ಅನುಷಾ ಮತ್ತು ಆಕೆಯ ಪತಿ ದೇವರಾಜು ಇದೀಗ ಹತ್ಯೆ ಪ್ರಕರಣದಲ್ಲಿ ಪೊಲೀಸರ ಅತಿಥಿಗಳಾಗಿದ್ದಾರೆ.
ಘಟನೆಯ ವಿವರ:
ಶಾರದಮ್ಮಅವರ ಏಕೈಕ ಮಗಳಾಗಿದ್ದ ಅನುಷಾ, ನವೆಂಬರ್ 22, 2022 ರಂದು ತಾಯಿಯ ಮನೆಗೆ ಹೋಗಿದ್ದಳು, ಈ ವೇಳೆ ಅವರ ಕಣ್ಣಿನ ಚಿಕಿತ್ಸೆ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ್ದಳು. ಈ ವೇಳೆ ಶಾರದಮ್ಮ ಕೋಪದಿಂದ ಮಗಳಿಗೆ ದೊಣ್ಣೆಯಿಂದ ಹೊಡೆಯಲು ಹೋಗಿದ್ದಾರೆ. ಈ ವೇಳೆ ಅನುಷಾ ತಾಯಿಯನ್ನು ಜೋರಾಗಿ ತಳ್ಳಿದ್ದಾಳೆ. ಶಾರದಮ್ಮನ ತಲೆ ಮಂಚದ ಅಂಚಿಗೆ ಬಡಿದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದರಿಂದ ಗಾಬರಿಯಾದ ದಂಪತಿ, ಶಾರದಮ್ಮ ಅವರ ಮೃತದೇಹವನ್ನು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನಕ್ಕೆ ಸಾಗಿಸಿ ಅಲ್ಲಿಯೇ ಹೂತು ಹಾಕಿದ್ದರು.
ಬಳಿಕ ಸಂಬಂಧಿಕರ ಶಾರದಮ್ಮ ಅವರ ಕುರಿತು ವಿಚಾರಿಸಲು ಆರಂಭಿಸಿದ್ದಾರೆ. ಹೀಗಾಗಿ ಶಾರದಮ್ಮ ನಾಪತ್ತೆಯಾಗಿದ್ದಾರೆ ಎಂದು ದಂಪತಿ ಮೈಸೂರು ಜಿಲ್ಲೆಯ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಅನುಷಾ ಮತ್ತು ಆಕೆಯ ಪತಿ ದೇವರಾಜುನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇವರಿಬ್ಬರ ವ್ಯತಿರಿಕ್ತ ಹೇಳಿಕೆ ಕಂಡು ಪೊಲೀಸರಿಗೆ ಅನುಮಾನ ಬಂದಿದೆ. ತೀವ್ರ ವಿಚಾರಗೊಳಪಡಿಸಿದಾಗ ಶಾರದಮ್ಮಳನ್ನು ಕೊಂದು ಹೂತುಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ.
ಸದ್ಯ ಈ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಮೃತದೇಹವನ್ನು ಹೊರತೆಗೆದು ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:
Click: ಎಂಥಾ ಮಕ್ಕಳಿಗೆ ಜನ್ಮ ಕೊಟ್ಟೆ ತಾಯಿ: 7 ಮಕ್ಕಳಿದ್ದರೂ ತಾಯಿ ಸತ್ತಾಗ ಒಬ್ಬರೂ ಬರಲಿಲ್ಲ!
Click: ಪ್ರೊಫೆಸರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ: ಸಿಎಂಗೆ ಪತ್ರ ಬರೆದ 500ಕ್ಕೂ ಅಧಿಕ ವಿದ್ಯಾರ್ಥಿನಿಯರು
Click: ಟೀ ಮಾರಾಟಗಾರ ಮತ್ತು ಮೂವರು ಅಪ್ರಾಪ್ತರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!