ರಾತ್ರಿ ವೇಳೆ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸಿಕ್ಕಿಬಿದ್ದಾತನಿಗೆ ಗ್ರಾಮಸ್ಥರು ಮಾಡಿದ್ದೇನು? - Mahanayaka
8:14 PM Wednesday 11 - December 2024

ರಾತ್ರಿ ವೇಳೆ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸಿಕ್ಕಿಬಿದ್ದಾತನಿಗೆ ಗ್ರಾಮಸ್ಥರು ಮಾಡಿದ್ದೇನು?

06/02/2021

ಯಾದಗಿರಿ:  ಒಂಟಿ ಮಹಿಳೆಯ ಮನೆಗೆ ನುಗ್ಗಿದ್ದ ವ್ಯಕ್ತಿಯನ್ನು ತೆಂಗಿನ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜೀಲಾನಿಸಾಬ್ ಎಂಬಾತ ಒಂಟಿ ಮಹಿಳೆಯ ಮನೆಗೆ ನುಗ್ಗಿದ್ದಾನೆ ಎಂದು ಆರೋಪಿಸಿ ತೆಂಗಿನ ಮರಕ್ಕೆ ಕಟ್ಟಿ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ.

ಗ್ರಾಮಸ್ಥರು ಆರೋಪಿ ಜೀಲಾನಿಸಾಬ್ ನನ್ನು ಮರಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಒಂಟಿ ಮಹಿಳೆಯ ಮನೆಗೆ ಆರೋಪಿ ಹೋಗಿದ್ದಾನೆ ಎನ್ನುವು ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಸ್ಥಳೀಯರು ಆರೋಪಿಯನ್ನು ಥಳಿಸಲು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ