ಒಂಟಿ ವೃದ್ಧೆಯ ಮನೆಗೆ ನುಗ್ಗಿ 52ರ ವ್ಯಕ್ತಿ ನಡೆಸಿದ ಕೃತ್ಯ ಕಂಡು ಬೆಚ್ಚಿಬಿದ್ದ ಪೊಲೀಸರು - Mahanayaka
11:04 PM Wednesday 11 - December 2024

ಒಂಟಿ ವೃದ್ಧೆಯ ಮನೆಗೆ ನುಗ್ಗಿ 52ರ ವ್ಯಕ್ತಿ ನಡೆಸಿದ ಕೃತ್ಯ ಕಂಡು ಬೆಚ್ಚಿಬಿದ್ದ ಪೊಲೀಸರು

maharashtra
26/05/2021

ಪುಣೆ: ವೃದ್ಧೆಯೊಬ್ಬರನ್ನು ಕ್ರೂರವಾಗಿ ಥಳಿಸಿ, ಚಿತ್ರಹಿಂಸೆ ನೀಡಿ, ಬಳಿಕ ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಚಕನ್ ಬಳಿಯ ಹಳ್ಳಿಯೊಂದರಲ್ಲಿ ನಡೆದಿದ್ದು, ಮಹಿಳೆಯ ಮೃತದೇಹ ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ.

75 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಆಕೆಯ ಮನೆಯಲ್ಲಿಯೇ ನಗ್ನವಾಗಿ ಪತ್ತೆಯಾಗಿತ್ತು. ನೆರೆಮನೆಯ 52 ವರ್ಷ ವಯಸ್ಸಿನ ವ್ಯಕ್ತಿ, ವೃದ್ಧೆಯ ಮನೆಗೆ ಪ್ರವೇಶಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ  ಆಕೆ ಪ್ರತಿಭಟಿಸಿದಾಗ ಥಳಿಸಿ, ಅತ್ಯಾಚಾರ ನಡೆಸಿದ್ದು ಬಳಿಕ ಮಾರಕಾಸ್ತ್ರದಿಂದ ವೃದ್ಧೆಯ ಶಿರಚ್ಛೇದನ ಮಾಡಿ ಹತ್ಯೆ ಮಾಡಿದ್ದಾನೆ.

ಆರೋಪಿ ಮಹಿಳೆಯ ಮನೆಯ ಬಳಿಯಲ್ಲಿದ್ದದ್ದನ್ನು ಇಲ್ಲಿನ ಸ್ಥಳೀಯರು ನೋಡಿದ್ದರು. ಈ ಬಗ್ಗೆ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದಾರೆ. ಆದರೆ, ಆ ವೇಳೆಗಾಗಲೇ ಆರೋಪಿಯು ತಲೆ ಮೆರೆಸಿಕೊಂಡಿದ್ದ. ತಕ್ಷಣವೇ ಪೊಲೀಸ್ ಸ್ಕ್ವಾಡ್ ಸಹಾಯದಿಂದ ಆರೋಪಿಯನ್ನು ಶೋಧ ನಡೆಸಿ ಬಂಧಿಸಿದ್ದಾರೆ. ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ.

ಇತ್ತೀಚಿನ ಸುದ್ದಿ